ಸುದ್ದಿ ಕಣಜ.ಕಾಂ
ಸಾಗರ: ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾಲೂಕಿನ ಬ್ಯಾಕೋಡಿನಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಮೂಲತಃ ಶಿವಮೊಗ್ಗ ತಾಲೂಕಿನ ಬೀರನಹಳ್ಳಿಯವನಾದ ದರ್ಶನ್ (14) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿದ್ಯಾಭ್ಯಾಸಕ್ಕಾಗಿ ಬ್ಯಾಕೋಡಿನಲ್ಲಿದ್ದ ದರ್ಶನ್ ಅವರ ಚಿಕ್ಕಮ್ಮ ಅವರೊಂದಿಗೆ ಇರುತ್ತಿದ್ದ. ಬಾಲಕ ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡಿದ್ದ ಎಂದು ತಿಳಿದುಬಂದಿದೆ.
ಓದಲ್ಲಿ ಇರಲಿಲ್ಲ ಆಸಕ್ತಿ | ಬಾಲಕನಿಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ ಎಂದು ತಿಳಿದುಬಂದಿದೆ. ಕೊರೊನಾ ವೇಳೆ ಶಿವಮೊಗ್ಗದ ತನ್ನ ಮನೆಗೆ ಬಂದಿದ್ದ. ಬಳಿಕ ಶಾಲೆಗಳು ಪುನರಾರಂಭಗೊಂಡಿದ್ದರಿಂದ ಮತ್ತೆ ಬ್ಯಾಕೋಡಿಗೆ ತೆರಳಿದ್ದ. ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಬಿಗಿದುಕೊಂಡಿದ್ದು, `ಸಾವಿಗೆ ಯಾರೂ ಕಾರಣರಲ್ಲ’ ಎಂದು ಡೆತ್ ನೋಟ್ ಕೂಡ ಬರೆದಿಟ್ಟಿದ್ದಾನೆ.
ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ದರ್ಶನ್ ತಾಯಿ ಭಾಗ್ಯ ದೂರು ನೀಡಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.