ಸುದ್ದಿ ಕಣಜ.ಕಾಂ
ಶಿಕಾರಿಪುರ: ಗಾಂಜಾ ಮಾರಾಟ ಮಾಡುತ್ತಿದ್ದ 4 ಜನ ಆರೋಪಿಗಳನ್ನು ಮಂಗಳವಾರ ಬಂಧಿಸಿ ಅವರಿಂದ 400 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಶಿಕಾರಿಪುರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಆಶ್ರಯ ಬಡಾವಣೆ ರಸ್ತೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೆÇಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು.
– ಕೆ.ಎಂ.ಶಾಂತರಾಜು, ಎಸ್.ಪಿ, ಶಿವಮೊಗ್ಗ
ಶಿಕಾರಿಪುರ ಡಿ.ವೈ.ಎಸ್.ಸಿ ಶಿವಾನಂದ್ ಮದರಕಂಡಿ, ಶಿಕಾರಿಪುರ ವೃತ್ತದ ಸಿಪಿಐ ಗುರುರಾಜ್ ಎನ್.ಮೈಲಾರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ ರಾಜುರೆಡ್ಡಿ ಬೆನ್ನೂರ್ ನೇತೃತ್ವದಲ್ಲಿ ಸಿಬ್ಬಂದಿ ಸಂತೋಷ್ ಧನುವಿನಮನಿ, ಪ್ರಸನ್ನ ನಾಯಕ, ಮಲ್ಲೇಶಪ್ಪ, ಶಿವಾನಂದ್ ಗಾಮದ್ ಹಾಗೂ ಸಿಪಿಸಿ ಪ್ರಶಾಂತ್ ಅವರುಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತರು | ಶಿಕಾರಿಪುರದ ಸುನೀಲ್ (26), ಇಮ್ರಾನ್ ಅಲಿಯಾಸ್ ಬೆಟ್ಟಿ ಇಮ್ರಾನ್ (22), ದಾದಾಪೀರ್ (22), ರಿಜ್ವಾನ್ (23) ಎಂಬುವವರನ್ನು ಬಂಧಿಸಲಾಗಿದೆ. 400 ಗ್ರಾಂ ಗಾಂಜಾ ಮತ್ತು ಗಾಂಜಾ ಮಾರಾಟ ಮಾಡಿ ಗಳಿಸಿದ್ದ 600 ರೂಪಾಯಿ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.