ರಾಮ ಮಂದಿರ ನಿರ್ಮಾಣ, ಮತಾಂತರದ ಬಗ್ಗೆ ಪೇಜಾವರ ಶ್ರೀಗಳು ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಕಳೆದ ಮೂರು ದಿನಗಳಿಂದ ಲೋಕ ಕಲ್ಯಾಣಾರ್ಥವಾಗಿ ನಡೆಯುತ್ತಿರುವ ಶ್ರೀ ಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.

VIDEO REPORT

ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!

ರಾಮಮಂದಿರ ನಿರ್ಮಾಣ ಮಾಡಿದರಷ್ಟೇ ಸಾಲದು. ಅದರೊಂದಿಗೆ ನಿರ್ವಹಣೆಯ ಕಡೆಗೂ ಗಮನ ಹರಿಸಬೇಕು ಎಂದು ತಿಳಿಸಿದರು.
ಭಾರತೀಯರ ಹಾಗೂ ಹಿಂದೂಗಳ ಕನಸಿನಂತೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ರಾಮ ಮಂದಿರ ಕೇವಲ ನಿರ್ಮಾಣವಾದರೆ ಸಾಲದು ನಿರ್ವಹಣೆ ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಬೇಕಾಗಿದೆ ಎಂದು ಹೇಳಿದರು.
ತಡೆಯಬೇಕಿದೆ ಮತಾಂತರ | ಹಿಂದೂ ಯುವಕರು ಮತಾಂತರಗೊಳ್ಳುತ್ತಿದ್ದಾರೆ. ಹಿಂದೂ ಸಂತತಿ ಮತ್ತು ಸಂಸ್ಕøತಿಯನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಇದೆ. ಸಂತತಿಯೊಂದಿಗೆ ಯುವಪೀಳಿಗೆಗೆ ಸಂಸ್ಕಾರ ಧಾರೆ ಎರೆಯುವ ಕೆಲಸ ಹಿರಿಯರದ್ದಾಗಿದೆ. ಈ ಕಾರ್ಯ ಮನೆಯಿಂದಲೇ ನಡೆಯಬೇಕಿದೆ.
ಮಾತೃ ಮಂಡಳಿಯ ಅಗತ್ಯವಿದೆ | ಯುವಪೀಳಿಗೆಗೆ ನಾನಾ ಕಾರಣಗಳಿಂದ ದಾರಿ ತಪ್ಪುತ್ತಿದ್ದಾರೆ. ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದನ್ನು ತಡೆಯಬೇಕಾದರೆ, ಮನೆಯಿಂದಲೇ ಶಿಕ್ಷಣ ಸಿಗಬೇಕು. ಇದಕ್ಕಾಗಿ ಮಾತೃ ಮಂಡಳಿಯ ರಚನೆಯ ಅಗತ್ಯವಿದೆ ಎಂದರು.

https://www.suddikanaja.com/2021/02/12/rama-mandir-donation-by-students/

error: Content is protected !!