BHADRAVATHI | ಮೂರುವರೆ ವರ್ಷದಿಂದ ಶಾಲೆಗೆ ಶಿಕ್ಷಕಿ ಅನಧಿಕೃತ ಗೈರು, ಅಂತಿಮ ಎಚ್ಚರಿಕೆ

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ತಾಲೂಕು ತಡಸ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ರಾಬಿಯ ಬಸ್ರಿ ಎಂಬುವವರು ಶಾಲೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

2017ರ ಜುಲೈ 26ರಿಂದ ಅನಧಿಕೃತವಾಗಿ ಶಾಲೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದು, ಈ ಪ್ರಕಟಣೆ ಪ್ರಕಟಿಸಿದ 15 ದಿನದೊಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಭದ್ರಾವತಿ ಬಿಇಒ ಸೂಚನೆ ನೀಡಿದ್ದಾರೆ.
ಶಿಕ್ಷಣ ಇಲಾಖೆಯಿಂದ ಅನೇಕ ಬಾರಿ ಶಾಲಾ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿ ಜ್ಞಾಪನಾ ಪತ್ರ ನೀಡಲಾಗಿತ್ತು. ಆದರೆ ಈ ಪತ್ರಕ್ಕೆ ಲಿಖಿತ ವಿವರಣೆಯಾಗಲಿ, ವಿಚಾರಣೆಗೆ ಹಾಜರಾಗುವುದಾಗಲಿ ಮಾಡಿರುವುದಿಲ್ಲ. ಆದ್ದರಿಂದ, ಇದು ಅಂತಿಮ ಎಚ್ಚರಿಕೆಯಾಗಿದ್ದು ಕೂಡಲೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ತಪ್ಪಿದಲ್ಲಿ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !!