5 ದಿನದಲ್ಲಿ 1 ಕೋಟಿಗೂ ಅಧಿಕ ಮೌಲ್ಯದ ರೇಷ್ಮೆ ಸೀರೆ ಮಾರಾಟ!

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಸಂದಿಗ್ಧ ಸ್ಥಿತಿಯಲ್ಲೂ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆ.ಎಸ್.ಐ.ಸಿ.) ಆಯೋಜಿಸಿದ್ದ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಮಾರ್ಚ್ 19ರಿಂದ 23ರ ವರೆಗೆ ನಡೆದ ಪ್ರದರ್ಶನ ಮತ್ತು ಮಾರಾಟದಲ್ಲಿ ಅಂದಾಜು 1 ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿದೆ ಎಂದು ನಿಗಮದ ನಿರ್ದೇಶಕ ಜಿ.ಪಿ.ವಿಜಯಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ | ರಾಷ್ಟ್ರೀಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ವಿರುದ್ಧ ಪ್ರಚೋದನಕಾರಿ ಹೇಳಿಕೆ ಕೇಸ್, ಕಾರಣವೇನು?

ಕೋವಿಡ್ ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಲ್ಲಿ ಮಾರಾಟ ಕುಂಠಿತವಾಗಬಹುದೆಂಬ ಆತಂಕವಿತ್ತು. ಆದರೆ, ನಿರೀಕ್ಷೆಗೂ ಮೀರಿ ದಾಖಲೆಯ ವಹಿವಾಟು ನಡೆದಿದೆ. ಅಲ್ಲದೇ ಗುಣಮಟ್ಟದ ರೇಷ್ಮೆ ಉತ್ಪನ್ನಗಳ ತಯಾರಿಕೆಯಲ್ಲಿ ಕೆ.ಎಸ್.ಐ.ಸಿಯ ಮೈಸೂರು ಸಿಲ್ಕ್ ಸೀರೆಗಳು ನೆಚ್ಚಿನ ಆಯ್ಕೆಯಾಗಿವೆ ಎಂಬುವುದಕ್ಕೆ ಮಾರಾಟವೇ ಸಾಕ್ಷಿಯಾಗಿದೆ ಎಂದು ವಿಜಯಕುಮಾರ್ ತಿಳಿಸಿದ್ದಾರೆ.

error: Content is protected !!