ಯಡಿಯೂರಪ್ಪ ಅವರೊಂದಿಗೆ ಯಾವುದೇ ಅಸಮಾಧಾನವಿಲ್ಲ: ಕೆ.ಎಸ್.ಈಶ್ವರಪ್ಪ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ‘ನನ್ನ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಡುವೆ ಯಾವುದೇ ಅಸಮಾಧಾನವಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಿಪಡಿಸಿದರು.

ಪಕ್ಷದ ವರಿಷ್ಠರಿಗೆ ಬರೆದಿರುವ ಪತ್ರದ ಕುರಿತು ಬುಧವಾರ ರಾತ್ರಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಇಲಾಖೆಗೆ ಸಂಬಂಧಪಟ್ಟ ವಿಚಾರಗಳನ್ನು ಹೇಳಿಕೊಂಡಿದ್ದೇನೆ. ಇದರಲ್ಲಿ ಅಸಮಾಧಾನ ಪ್ರಶ್ನೆಯೇ ಇಲ್ಲ. ಇಲಾಖೆಯ ವಿಚಾರಗಳನ್ನು ಚರ್ಚಿಸಲು ರಾಜ್ಯಪಾಲರಷ್ಟೇ ಅಲ್ಲ, ದೆಹಲಿಗೂ ಹೋಗುತ್ತೇನೆ. ಇದರಲ್ಲೇನೂ ವಿಶೇಷವಿಲ್ಲ’ ಎಂದು ಹೇಳಿದರು.

error: Content is protected !!