ಶಿವಮೊಗ್ಗದಲ್ಲಿ ಹೇಗಿದೆ ಎರಡನೇ ಕೆ.ಎಸ್.ಆರ್.ಟಿ.ಸಿ ಮುಷ್ಕರ, ಬಸ್ ಲಭ್ಯ ಇವೆಯೇ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಾರಿಗೆ ಸಂಸ್ಥೆ ನೌಕರರು ವೇತನ ಪರಿಷ್ಕರಣೆ ಸೇರಿದಂತೆ ನಾನಾ ಬೇಡಿಕೆಗಳಿಗೆ ಆಗ್ರಹಿಸಿ ನಡೆಸುತ್ತಿರುವ ಮುಷ್ಕರ ಎರಡನೇ ದಿನ ತಲುಪಿದೆ. ಆದರೆ, ಮೊದಲನೇ ದಿನಕ್ಕೆ ಹೋಲಿಸಿದ್ದಲ್ಲಿ ಎರಡನೇ ದಿನ ಸಂಸ್ಥೆಯ ಕೆಲ ಬಸ್ ಗಳು ಸಂಚರಿಸಿದ್ದು ವಿಶೇಷವಾಗಿತ್ತು.

READ | ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಳಿ ಸಿಕ್ತು 16 ಕೆಜಿ ಗಾಂಜಾ, 4 ಬಂದೂಕು

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಗುರುವಾರ 16 ಬಸ್ ಸಂಚರಿಸಿವೆ. ಭದ್ರಾವತಿ, ಶಿಕಾರಿಪುರ, ಹರಿಹರ ಇನ್ನತರ ಭಾಗಗಳಿಗೆ ಸರ್ಕಾರಿ ಬಸ್ ಸೇವೆ ಅಬಾಧಿತವಾಗಿತ್ತು. ನಿರೀಕ್ಷೆಯಂತೆ ಪ್ರಯಾಣಿಕರ ಸಂಖ್ಯೆ ಇರಲಿಲ್ಲ. ಭಾರಿ ಕಡಿಮೆ ಸಂಖ್ಯೆಯಲ್ಲಿ ಜನ ಬಸ್ ನಿಲ್ದಾಣಕ್ಕೆ ಆಗಮಿಸಿದ್ದರು.
ಎರಡನೇ ದಿನ ಕೂಡ ಸರ್ಕಾರಿ ಬಸ್ ನಿಲ್ದಾಣದಿಂದಲೇ ಖಾಸಗಿ ಬಸ್ ಸಂಚರಿಸಿದವು. ಶಿವಮೊಗ್ಗ ಘಟಕದಿಂದ 5 ಬಸ್‍ಗಳು ಸಂಚರಿಸಿದರೆ, ಸಾಗರ ಘಟಕದಿಂದ 2, ಹೊನ್ನಾಳಿ ಘಟಕದಿಂದ 2 ಬಸ್ ಸಂಚರಿಸಿದವು.

error: Content is protected !!