ಕೆ.ಎಸ್.ಆರ್.ಟಿ.ಸಿ. ಮುಷ್ಕರ | ಮೂರನೇ ದಿನ ಹೇಗಿದೆ ಬಸ್ ಸಂಚಾರ?, ಎಲ್ಲೆಲ್ಲಿಗೆ ಬಸ್ ಲಭ್ಯ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿ ನೌಕರರ ಮುಷ್ಕರ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಮುನಿಸಿಕೊಂಡು ಪ್ರತಿಭಟನೆಯ ಹೆಜ್ಜೆ ತುಳಿದಿರುವ ನೌಕರರು ಕರ್ತವ್ಯಕ್ಕೆ ಹಾಜರಾಗಿಲ್ಲ. ಇದರಿಂದಾಗಿ, ಬೆಳಗ್ಗೆ ಕೇವಲ ನಗರ ಸಾರಿಗೆಯ ಒಂದೆರಡು ಬಸ್ ಗಳು ಮಾತ್ರ ಪ್ರಯಾಣಿಸಿದವು.

ಇನ್ನುಳಿದಂತೆ, ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ನಿಲುಗಡೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಜಿಲ್ಲೆಯಾದ್ಯಂತ ಖಾಸಗಿ ಬಸ್ ಗಳ ಸಂಚಾರ ಎಂದಿನಂತಿದೆ.

ವಿರಳ ಪ್ರಯಾಣಿಕರು | ಖಾಸಗಿ ಬಸ್ ನಿಲ್ದಾಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನರ ಓಡಾಟವಿದೆ. ಆದರೆ, ಇತ್ತ ಸರಕಾರಿ ಬಸ್ ನಿಲ್ದಾಣದಲ್ಲಿ ನೀರವ ಮೌನ ಆವರಿಸಿದೆ. ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದು, ದೂರದ ಪ್ರಯಾಣದಿಂದಾಗಿ ನಿಲ್ದಾಣದಲ್ಲಿಯೇ ಬೆಳಗ್ಗೆಯಿಂದ ಕಾಯುತ್ತಿದ್ದಾರೆ.

error: Content is protected !!