ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಮೊಬೈಲ್ ಕಂಪೆನಿ ಮ್ಯಾನೇಜರ್ ಫೋನ್ ಮಾಡುತ್ತಿರುವುದಾಗಿ ನಂಬಿಸಿ ಮಹಿಳೆಗೆ 77,100 ರೂಪಾಯಿ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹೊಸಮನೆಯ ಮಹಿಳೆಯೊಬ್ಬರು ಮೋಸ ಹೋಗಿದ್ದಾರೆ. ಜೂನ್ 1ರಂದು ಕರೆ ಮಾಡಿ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಮಹಿಳೆಯ ಮೊಬೈಲ್ ನಂಬರ್ ಗೆ 25 ಲಕ್ಷ ರೂಪಾಯಿ ಬಹುಮಾನ ಬಂದಿರುವುದಾಗಿ ತಿಳಿಸಿದ್ದಾರೆ.
ಇದನ್ನು ಮಹಿಳೆ ಸಹ ನಂಬಿದ್ದಾರೆ. ಮ್ಯಾನೇಜರ್ ಸೋಗಿನಲ್ಲಿ ಫೋನ್ ಮಾಡಿದ್ದ ವ್ಯಕ್ತಿಯು ಲಾಟರಿ ಹಣ ಖಾತೆಗೆ ಜಮಾ ಆಗಬೇಕಾದರೆ ಚಾರ್ಜ್ ತಗುಲುತ್ತದೆ. ಹೀಗಾಗಿ, ಗೂಗಲ್ ಪೇ ಮೂಲಕ ಹಣ ಕಳುಹಿಸಿ ಎಂದು ಹೇಳಿದ್ದಾನೆ. ಅದರಂತೆ, ಹಂತ ಹಂತವಾಗಿ ಮಹಿಳೆಯು ಒಟ್ಟು 77,100 ರೂಪಾಯಿ ಕಳುಹಿಸಿದ್ದಾಳೆ. ನಂತರ ಮೋಸ ಹೋಗಿರುವುದು ಗಮನಕ್ಕೆ ಬಂದಿದೆ.
ಮಹಿಳೆಯು ಜೂನ್ 5ರಂದು ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರನ್ವಯ ತನಿಖೆ ನಡೆಸಲಾಗುತ್ತಿದೆ.
https://www.suddikanaja.com/2021/03/15/fraud-case-in-cyber-crime-station/