ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ ಕಸದ ರಾಶಿ, ಅಧಿಕಾರಿಗಳು ಇತ್ತ ವಹಿಸುವರೇ ಗಮನ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತದ ಆವರಣವೀಗ ನಾರುತ್ತಿದೆ. ಎಲ್ಲೆಂದರಲ್ಲಿ ಬಾಟಲ್, ಕಸ ಬಿಸಾಡಲಾಗಿದ್ದು, ತ್ಯಾಜ್ಯದ ರಾಶಿ ಶೇಖರಣೆಯಾಗಿದೆ.

READ | ಕೆ.ಎಸ್.ಆರ್.ಟಿ.ಸಿ. ಬಸ್ ಮುಷ್ಕರ ಹಿನ್ನೆಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಮತ್ತೊಂದು ರೈಲು ಸಂಚಾರ

ಸ್ವಚ್ಛತಾ ಸಿಬ್ಬಂದಿಯ ಗುತ್ತಿಗೆ ಅವಧಿ ಮುಗಿದಿರುವುದರಿಂದ ಅವರನ್ನು ಗುತ್ತಿಗೆ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಿದ್ದು, ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಹೀಗಾಗಿ, ಜೋಗದ ಆವರಣ ಕಸದಿಂದಾ ಆವೃತ್ತವಾಗಿದೆ.

ಶಿವಮೊಗ್ಗೆಯ ಅಸ್ಮಿತೆ ಜೋಗ | ಜಿಲ್ಲೆಯಲ್ಲಿ ಅಸ್ಮಿತೆಯಂತಿರುವ ಹಾಗೂ ದೇಶ, ವಿದೇಶಗಳಿಂದ ಜೋಗದ ಸೊಬಗನ್ನು ಕಾಣಸಲು ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುವ ರಾಜಾ, ರೋರರ್, ರಾಕೆಟ್, ರಾಣಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಬೇಸಿಗೆಯಲ್ಲಿ ಜೋಗದ ಪ್ರಾಪತದಲ್ಲಿ ನೀರು ಕಡಿಮೆಯಾಗುವುದರಿಂದ ಪ್ರವಾಸಿಗರು ಈ ಕಡೆಗೆ ಬರುವುದು ವಿರಳ. ಹೀಗಾಗಿ, ಈ ಅಧ್ವಾನ ಸೃಷ್ಟಿಯಾಗಿದೆ.
ವಾರ್ಷಿಕ ಕೋಟ್ಯಂತರ ರೂಪಾಯಿ ಆದಾಯ ತಂದುಕೊಡುವ ಜೋಗ ಪ್ರವಾಸಿ ತಾಣದ ಪೂರ್ಣ ಜವಾಬ್ದಾರಿ ಹೊತ್ತಿರುವ ಜೋಗ ನಿರ್ವಹಣಾ ಪ್ರಾಧಿಕಾರ ಕೂಡ ಇದರೆಡೆಗೆ ಗಮನ ಹರಿಸುತ್ತಿಲ್ಲ.

ಸಂಸದ ಬಿ.ವೈ.ರಾಘವೇಂದ್ರ ಅವರು ಜೋಗ ಜಲಪಾತಕ್ಕೆ ಕೋಟ್ಯಂತರ ಆದಾಯ ತಂದಿದ್ದು, ಅಭಿವೃದ್ಧಿಯ ಕನಸು ಕಾಣುತ್ತಿದ್ದಾರೆ. ಅದರ ಮಧ್ಯೆ ಜೋಗ ನಿರ್ವಹಣಾ ಪ್ರಾಧಿಕಾರದ ನಿರ್ಲಕ್ಷ್ಯದ ಫಲವಾಗಿ ಪ್ರವಾಸಿ ತಾಣ ಗಬ್ಬು ನಾರುತ್ತಿದೆ. ಇದರೆಡೆಗೆ ಗಮನ ಹರಿಸಬೇಕೆನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಜೋಗ ಟೆಂಡರ್ ಅವಧಿ ಮುಗಿದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತುರ್ತಾಗಿ ಜೋಗದ ಸ್ವಚ್ಛತೆಯ ಅಗತ್ಯವಿದೆ.

https://www.suddikanaja.com/2021/01/09/administrative-approval-for-jog-development/

error: Content is protected !!