ಶಿವಮೊಗ್ಗದಲ್ಲಿ ಸಿಡಿಲು ಸಹಿತ ಧಾರಾಕಾರ ಮಳೆ, ಎಲ್ಲೆಲ್ಲಿ ಮಳೆಯಾಗಿದೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಾದ್ಯಂತ ಭಾನುವಾರ ಮಳೆರಾಯನ ಆರ್ಭಟ ಜೋರಾಗಿದೆ. ಗುಡುಗು, ಸಿಡಿಲು ಸಹಿತ ಹಲವೆಡೆ ಆಲಿಕಲ್ಲು ಮಳೆಯಾಗಿದೆ.

READ | ವಿಶ್ವವಿಖ್ಯಾತ ಜೋಗದ ಆವರಣದಲ್ಲಿ ಮದ್ಯದ ಖಾಲಿ ಬಾಟಲ್! ತುಂಬಿ ತುಳುಕುತ್ತಿದೆ ಕಸದ ರಾಶಿ, ಅಧಿಕಾರಿಗಳು ಇತ್ತ ವಹಿಸುವರೇ ಗಮನ

ಶಿವಮೊಗ್ಗ ನಗರದಲ್ಲಿ ಸಂಜೆ 8.30ರ ನಂತರ ದಿಢೀರ್ ಮಳೆಯಾಗಿದ್ದು, ರಸ್ತೆಯಿಡೀ ಮಳೆ ನೀರು ತುಂಬಿ ಅಲ್ಲಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.
ಸೊರಬದಲ್ಲಿ ಸಂಜೆಯಿಂದಲೇ ಮಳೆಯಾಗಿದ್ದು, ಆಲಿಕಲ್ಲು ಮಳೆಯಾಗಿದೆ. ಸಾಗರ, ಹೊಸನಗರದಲ್ಲಿ ವರ್ಷಧಾರೆಯಾಗಿದೆ.
ಹವಾಮಾನ ಇಲಾಖೆಯು ನೀಡಿದ ಮುನ್ಸೂಚನೆಯಂತೆ ಭಾನುವಾರ ಮಳೆಯಾಗಿದೆ. ಮಧ್ಯಾಹ್ನದವರೆಗೆ ಬಿರು ಬಿಸಿಲಿತ್ತು. ಸಂಜೆಯ ಬಳಿಕ ಏಕಾಏಕಿ ವರ್ಷಧಾರೆಯಾಗಿದೆ.

error: Content is protected !!