ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಳೆದ 14 ದಿನಗಳಲ್ಲಿ ಕೊರೊನಾ ಮೂವರ ಜೀವ ನುಂಗಿದೆ. ಬುಧವಾರ ರಿಪ್ಪನಪೇಟೆಯ ಗ್ರಾಪಂ ಮಾಜಿ ಸದಸ್ಯರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಗವಟೂರು ಗ್ರಾಮದ ಜಿ.ಟಿ.ಯೋಗೇಶ್ ಎಂಬುವವರು ಸಾವನ್ನಪ್ಪಿದ್ದು, ಇದುವರೆಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 352ಕ್ಕೆ ತಲುಪಿದೆ. ಯೋಗೇಶ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಉಸಿರಾಟದ ಸಮಸ್ಯೆಯೂ ಆಗಿತ್ತು. ತೀವ್ರ ಅನಾರೋಗ್ಯದಿಂದಾಗಿ ವಿಧಿವಶರಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 539ಕ್ಕೆ ಏರಿಕೆ | ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದ್ದು, ಬುಧವಾರ 58 ಜನರಲ್ಲಿ ಕೊರೊನಾ ವೈರಾಣು ಪತ್ತೆಯಾಗಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿಗಳಿದ್ದಾರೆ.
ಸೋಂಕಿತರಲ್ಲಿ 117 ಜನ ಕೋವಿಡ್ ವಾರ್ಡ್, 62 ಖಾಸಗಿ ಆಸ್ಪತ್ರೆ, 368 ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಬುಧವಾರ 1,435 ಜನರ ಮಾದರಿ ಪರೀಕ್ಷಿಸಿದ್ದು, 2,147 ವರದಿಗಳು ನೆಗೆಟಿವ್ ಇವೆ.
ತಾಲೂಕುವಾರು ವರದಿ | ಶಿವಮೊಗ್ಗ 26, ಭದ್ರಾವತಿ 3, ಶಿಕಾರಿಪುರ 1, ತೀರ್ಥಹಳ್ಳಿ 8, ಸೊರಬ 5, ಹೊಸನಗರ 14 ಹಾಗೂ ಹೊರ ಜಿಲ್ಲೆಯ ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.