ಲಖ್ನೌನಲ್ಲಿ ನಡೆದ ರೀಯಲ್ ಘಟನೆ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಲ್ಲಿ ಮಿಂಚಿರುವ ಶಿವಮೊಗ್ಗೆಯ ಪ್ರತಿಭೆಗಳು, ಯಾವುದೀ ಚಿತ್ರ, ಎಂದು ತೆರೆಗೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಖ್ನೌನಲ್ಲಿ ನಡೆದ ನೈಜ ಘಟನೆ ಆಧರಿತ ‘ಕೃಷ್ಣ ಟಾಕೀಸ್’ ಚಿತ್ರದಲ್ಲಿ ಶಿವಮೊಗ್ಗದ ಮೂವರು ನಟಿಸಿದ್ದು, ಈಗಾಗಲೇ ಸಿನಿ ಆಸಕ್ತರಲ್ಲಿ ಚಿತ್ರದ ಹಾಡು ಮತ್ತು ಟ್ರೇಲರ್ ಭಾರಿ ಸದ್ದು ಮಾಡಿದೆ.

READ | ಕೆ.ಎಸ್.ಆರ್.ಟಿ.ಸಿಗೆ ಕೋಟಿಗಟ್ಟಲೇ ನಷ್ಟ, ಯುಗಾದಿ ಸೀಸನ್ ವೊಂದರಲ್ಲೇ ₹ 10 ಲಕ್ಷ ಖೋತಾ!

ಕೃಷ್ಣ ಸರಣಿ ಖ್ಯಾತಿಯ ಯಶಸ್ವಿ ನಾಯಕ ನಟ ಕೃಷ್ಣ ಅಜಯ್ ರಾವ್ ನಾಯಕರಾಗಿ ಅಭಿನಯಿಸಿರುವ 26ನೇ ಸಿನಿಮಾ ಇದಾಗಿದ್ದು, ಏಪ್ರಿಲ್ 16ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ಶಿವಮೊಗ್ಗೆಯ ಮೂವರು ರಂಗಭೂಮಿ ಕಲಾವಿದರು, ಗಮನಾರ್ಹ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಎಲ್ಲೆಲ್ಲಿ ತೆರೆಗೆ | ನಗರದ ಭಾರತ್ ಸಿನಿಮಾಸ್ ನಲ್ಲಿ 7 ಪ್ರದರ್ಶನ ಹಾಗೂ ಶ್ರೀ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಾಲ್ಕು ಪ್ರದರ್ಶನಗಳಲ್ಲಿ ಚಿತ್ರ ತೆರೆಗೆ ಬರುತ್ತಿದೆ. ರಂಗಕರ್ಮಿ ವೈದ್ಯ, ರಂಗ ಕಲಾವಿದೆ ವಿಜಯಲಕ್ಷ್ಮಿ, ಚಲನಚಿತ್ರ ಸಂಘಟಕ ರಾಮಣ್ಣ ಚಿತ್ರದಲ್ಲಿ ಅಭಿನಯಿಸಿದ್ದಾರೆ.

READ | ನಾಳೆ ಶಿವಮೊಗ್ಗದ ಹಲವೆಡೆ ಕರೆಂಟ್ ಇರಲ್ಲ

ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರಕ್ಕೆ ಬಾಲ್ಕನಿ ಸೀಟ್ ನಂ. 13 ಅಡಿ ಬರಹ ಕೂಡ ಇದೆ. ನಟ ಗೋವಿಂದ್‍ರಾಜ್ ಆಲೂರು ಈ ಚಿತ್ರದ ನಿರ್ಮಾಪಕರಾಗಿದ್ದು, ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅವುಗಳಿಗೆ ಪ್ರಮೋದ್ ಹಾಗೂ ಆನಂದ ಪ್ರಿಯರವರ ಸಾಹಿತ್ಯವಿದೆ.

ತಾರಾಗಣ | ಅಭಿಷೇಕ ಕಾಸರಗೋಡುರವರ ಛಾಯಾಗ್ರಹಣವಿರುವ ಈ ಚಿತ್ರದ ನಾಯಕಿಯರಾಗಿ ಅಪೂರ್ವ, ಸಿಂಧು ಲೋಕನಾಥ್ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಚಿಕ್ಕಣ್ಣ , ಯಶ್ ಶೆಟ್ಟಿ , ಶಿವಮೊಗ್ಗ ವೈದ್ಯ, ಪ್ರಮೋದ್ ಶೆಟ್ಟಿ, ಶಿವಮೊಗ್ಗ ರಾಮಣ್ಣ, ಶ್ರೀನಿವಾಸ್ ಪ್ರಭು, ವಿಜಯಲಕ್ಷ್ಮಿಮೊದಲಾದವರ ಅಭಿನಯವಿದೆ.

error: Content is protected !!