ಕೆ.ಎಸ್.ಆರ್.ಟಿಸಿ ನೌಕರರ ಕ್ಯಾಂಡಲ್ ಮಾರ್ಚ್ ವೇಳೆ ಎ.ಎಸ್.ಐಗೆ ಘೇರಾವ್, ಕಾರಣವೇನು ಗೊತ್ತಾ?

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ನೌಕರರು ಮಾಡುವ ಪ್ರತಿಭಟನೆ, ಮುಷ್ಕರಗಳ ಬಗ್ಗೆ ಮೇಲಾಧಿಕಾರಿಗೆ ಮಾಹಿತಿ ನೀಡುತ್ತಾರೆ ಎಂಬ ಕಾರಣಕ್ಕೆ ಕೆ.ಎಸ್.ಆರ್.ಟಿ.ಸಿ ಭದ್ರತಾ ವಿಭಾಗದ ಎ.ಎಸ್.ಐವೊಬ್ಬರನ್ನು ಗುರುವಾರ ಗೋಪಿ ವೃತ್ತದಲ್ಲಿ ಘೇರಾವ್ ಮಾಡಲಾಯಿತು.

READ | ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ನಾಲ್ವರು ಕೆ.ಎಸ್.ಆರ್.ಟಿ.ಸಿ ನೌಕರರು ಸಸ್ಪೆಂಡ್, ಡ್ಯೂಟಿಗೆ ಹಾಜರಾಗದ ನಾಲ್ವರ ಎತ್ತಂಗಡಿ

ಸರ್ಕಾರದ ಧೋರಣೆ ಖಂಡಿಸಿ ನೌಕರರು ಸಂಜೆ ನಡೆಸಿದ ಕ್ಯಾಂಡಲ್ ಮಾರ್ಚ್ ವೇಳೆ ಎ.ಎಸ್.ಐ ಅದರ ವಿಡಿಯೋ ಮಾಡುತ್ತಿದ್ದ. ಇದರಿಂದ ಕೆಂಡಾಮಂಡಲಗೊಂಡ ಪ್ರತಿಭಟನಾಕಾರರು ಆತನಿಗೆ ಘೇರಾವ್ ಹಾಕಿ ಸರ್ಕಾರದ ವ್ಯವಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ವಕೀಲ ಕೆ.ಪಿ.ಶ್ರೀಪಾಲ್, ದಸಂಸ ಮುಖಂಡ‌ ಗುರುಮೂರ್ತಿ, ಬಂಜಾರ ವಿದ್ಯಾರ್ಥಿ ಸಂಘದ ಗಿರೀಶ್‌, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಮುಖಂಡ ಸಂತೋಷ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

error: Content is protected !!