ಭದ್ರಾವತಿಯ ಇಬ್ಬರು ಸಿಬ್ಬಂದಿ ಸೇರಿ ಕೆ.ಎಸ್.ಆರ್.ಟಿ.ಸಿಯ ಮೂವರ ಮೇಲೆ ಎಫ್.ಐ.ಆರ್, ಕಾರಣವೇನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆ.ಎಸ್.ಆರ್.ಟಿ.ಸಿಯ ಮೂವರು ನೌಕರರ ಮೇಲೆ ಪ್ರಕರಣ ದಾಖಲಾಗಿದೆ. ಇವರೆಲ್ಲರೂ ಸಾರಿಗೆ ಸಂಸ್ಥೆಯ ನೌಕರರಾಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

READ | ಬಸ್ ಸಂಚಾರಕ್ಕೆ ಅಡ್ಡಿ ಪಡಿಸಿದ ನಾಲ್ವರು ಕೆ.ಎಸ್.ಆರ್.ಟಿ.ಸಿ ನೌಕರರು ಸಸ್ಪೆಂಡ್, ಡ್ಯೂಟಿಗೆ ಹಾಜರಾಗದ ನಾಲ್ವರ ಎತ್ತಂಗಡಿ

ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸಂತೋಷ್ ಕುಮಾರ್(34), ಹೊನ್ನಾಳಿಯ ಎ.ಭರಮಪ್ಪ(53), ಭದ್ರಾವತಿಯ ಯೋಗೇಶ್ ನಾಯ್ಕ್ (37) ಅವರ ವಿರುದ್ಧ ದೂರು ನೀಡಲಾಗಿದೆ.

ಕಾರಣವೇನು | ಕೆ.ಎಸ್.ಆರ್.ಟಿ.ಸಿ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಯ ಮೂಲಕ ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ. ಆದರೆ, ಏಪ್ರಿಲ್ 1ರಂದು ನಗರದ ಹೊರವಲಯದ ಶಾಹಿ ಗಾರ್ಮೆಂಟ್ಸ್ ಸಮೀಪ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಅನ್ನು ತಡೆದು ಪ್ರತಿಭಟನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಮೂವರ ಮೇಲೆ ಐಪಿಸಿ ಸೆಕ್ಷನ್ 341, 186, 290, 34 ಅಡಿ ಕೋಟೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ.

https://www.suddikanaja.com/2021/04/14/man-dead-due-to-covid-2/

error: Content is protected !!