ಮಲೆನಾಡಿನಲ್ಲಿ ನಡೀತಿದೆ ‘ಅದೊಂದಿತ್ತು ಕಾಲ’ ಶೂಟಿಂಗ್, ಅದಿತಿ ಪ್ರಭುದೇವ್, ಅಮೂಲ್ಯ, ವಿನಯ್ ರಾಜ್ ಕುಮಾರ್ ಆಗಮನ

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ತಾಲೂಕಿನ ವಿವಿಧೆಡೆ ‘ಅದೊಂದಿತ್ತು ಕಾಲ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಏಪ್ರಿಲ್ 4ರಿಂದ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಈ ತಿಂಗಳ 27ರ ವರೆಗೆ ಚಿತ್ರ ತಂಡ ಇಲ್ಲಿಯೇ ಇರಲಿದೆ.

READ | ಪಕ್ಕಾ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಚಿತ್ರ `ಓಲ್ಡ್ ಮಾಂಕ್’, ಫಸ್ಟ್‍ಲುಕ್‍ಗೆ ಅಭಿಮಾನಿಗಳು ಫಿದಾ

ವಿನಯ್ ರಾಜ್ ಕುಮಾರ್ ಅವರು ಚಿತ್ರದಲ್ಲಿ ನಾಯಕ ನಟನಾಗಿದ್ದು, ಅದಿತಿ ಪ್ರಭುದೇವ್ ಅವರು ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಜತೆಗೆ, ಗಟ್ಟಿಮೇಳ ಧಾರವಾಹಿಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಅಮೂಲ್ಯ (ನಿಶಾ) ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
cinema shooting

ಕೀರ್ತಿ ನಿರ್ದೇಶಿಸಿರುವ ಚಿತ್ರ ಇದಾಗಿದ್ದು, 90ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಇದರಲ್ಲಿ ಹೆಣೆಯಲಾಗಿದೆ ಎನ್ನಲಾಗಿದೆ. ವಾಸ್ತವಿಕತೆಗೆ ಹತ್ತಿರವಿರುವ ಕಥೆ ಇದಾಗಿದ್ದು, ವೀಕ್ಷಕರ ಮನಸ್ಸು ಗೆಲ್ಲಲಿದೆ ಎನ್ನುತ್ತದೆ ಚಿತ್ರತಂಡ. ಪ್ರಸ್ತುತ ತೀರ್ಥಹಳ್ಳಿಯಲ್ಲಿ ವಿನಯ್ ರಾಜ್ ಕುಮಾರ್ ಅವರು ಬಸ್ ನಲ್ಲಿ ಪ್ರಯಾಣಿಸುವುದು ಸೇರಿ ವಿವಿಧ ಸೀನ್ ಗಳನ್ನು ಚಿತ್ರಿಸಲಾಗುತ್ತಿದೆ. ಅದಿತಿ ಪ್ರಭುದೇವ್ ಬಂದು ಒಂದು ಸೀನ್ ಮುಗಿಸಿ ಹೋಗಿದ್ದು, ಅಮೂಲ್ಯ ಅವರೊಂದಿಗೆ ಶೂಟಿಂಗ್ ನಡೆಯುತ್ತಿದೆ. ಒಟ್ಟಾರೆ, ಮಲೆನಾಡಿನ ಸೌಂದರ್ಯದ ನಡುವೆ ಇನ್ನೊಂದು ಚಿತ್ರ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಳ್ಳಲಿದೆ.
ಪ್ರೀತಿಯಿಂದ ಕಿರುಕಾಣಿಕೆ | ಚಿತ್ರೀಕರಣಕ್ಕೆ ಬಂದಿರುವ ಅಮೂಲ್ಯ ಹಾಗೂ ರಾಯಲ್ ಸ್ಟಾರ್ ವಿನಯ್ ರಾಜ್ ಕುಮಾರ್ ಅವರಿಗೆ ಅಪ್ಪು ಅಡ್ಡ ಶಿವಮೊಗ್ಗ ಟೀಂ ಭೇಟಿನಿಂದ ಪ್ರೀತಿಯಿಂದ ಸನ್ಮಾನಿಸಲಾಗಿದೆ. ಹಾಗೂ ಕಿರುಕಾಣಿಕೆ ನೀಡಲಾಗಿದೆ.
ಇನ್ನೆಲ್ಲಿ ಶೂಟಿಂಗ್ | ತೀರ್ಥಹಳ್ಳಿ ಸೇರಿದಂತೆ ಹೊಸನಗರ ತಾಲೂಕಿನ ನಗರದಲ್ಲಿ ಚಿತ್ರೀಕರಣ ನಡೆಯಲಿದೆ.

https://www.suddikanaja.com/2021/01/01/bharatipura-cross-ninda-churu-munde-short-movie-released-in-you-tube/

error: Content is protected !!