ನೈಟ್, ವೀಕೆಂಡ್ ಕರ್ಫ್ಯೂ ಏನಿರುತ್ತೆ, ಏನಿರಲ್ಲ, ಮದ್ವೆ ಮಾಡಬಹುದಾ, ನೈಟ್ ಡ್ಯೂಟಿ ಏನು ಕಥೆ, ಎಲ್ಲ ಪ್ರಶ್ನೆಗೂ ಡಿಸಿ ಉತ್ತರಿಸಿದ್ದಾರೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಂತೆ ಬೆಳಗ್ಗೆ 6 ರಿಂದ ರಾತ್ರಿ 9ರ ವರೆಗೆ ಪಡಿತರ ಅಂಗಡಿ, ದಿನಸಿ, ಹಣ್ಣು ತರಕಾರಿ, ಮೀನು ಮಾಂಸ, ಹಾಲಿನ ಅಂಗಡಿ, ಪಶು ಆಹಾರ, ಅಗತ್ಯ ಸರಕು, ಕಟ್ಟಡ ನಿರ್ಮಾಣ ಸಾಮಗ್ರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ನಿಬರ್ಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಹೇಳಿದರು.

VIDEO REPORT

READ | ಬಸ್ ನಿಲ್ದಾಣದಲ್ಲಿಲ್ಲ ಸ್ಕ್ರೀನಿಂಗ್, ಸೋಶಿಯಲ್ ಡಿಸ್ಟೆನ್ಸ್, ವಹಿಸಬೇಕಿದೆ ಎಚ್ಚರ

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂ ವ್ಯಾಪಾರ ನಡೆಸಲು ಅನುಮತಿ ಇದೆ. ಮುಂಗಾರು ಕೃಷಿ ಪೂರ್ವ ಚಟುವಟಿಕೆಗಳಿಗೆ ನಿಬರ್ಂಧ ಇಲ್ಲ. ಎಲ್ಲ ರೀತಿಯ ಕೈಗಾರಿಕೆ, ಸಂಸ್ಥೆಗಳು ಕಾರ್ಯನಿರ್ವಹಿಸಬಹುದು.

ನೈಟ್ ಶಿಫ್ಟ್ ನವರಿಗೆ ಸಿಗಲಿದೆ ಐಡಿ ಕಾರ್ಡ್ | ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಸಂಬಂಧಪಟ್ಟ ಕಂಪೆನಿಯ ಅಧಿಕೃತವಾದ ಐಡಿ ಕಾರ್ಡ್ ಹೊಂದಿರಲೇಬೇಕು
ಮದುವೆ ಸಮಾರಂಭಗಳಿಗೆ ತಹಸೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಗರಿಷ್ಠ 50 ಮಂದಿ ಮೀರದಂತೆ ನಿರ್ವಹಿಸಬೇಕು. ಮದುವೆಗೆ ಹೋಗಬೇಕಾದವರೆ ಒಂದೇ ತಂಡದಲ್ಲಿ ಹೋಗಬೇಕು. ಯಾರೋ ಯಾವುದೋ ಭಾಗದಿಂದ ಮದುವೆಗೆಂದು ಓಡಾಡುವಂತಿಲ್ಲ. ಇದನ್ನು ಕಟ್ಟುನಿಟ್ಟಿನಿಂದ ಪಾಲಿಸಲೇಬೇಕು. ನಿಶ್ಚಿತಾರ್ಥ, ಜನ್ಮ ದಿನ, ಇತ್ಯಾದಿ ಪಾರ್ಟಿಗಳಿಗೆ ಅವಕಾಶ ಇರುವುದಿಲ್ಲ. ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಮುಕ್ತ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ವೀಕೆಂಡ್ ಕರ್ಫ್ಯೂ: ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಸಂಪೂರ್ಣ ಕಫ್ರ್ಯೂ ಇರಲಿದೆ. ಈ ಅವಧಿಯಲ್ಲಿ ಬೆಳಗ್ಗೆ 6ರಿಂದ 10ರ ವರೆಗೆ ದಿನಸಿ, ತರಕಾರಿ ಹಾಲು ಅಂಗಡಿಗಳು ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ತೆರೆದಿರುತ್ತದೆ. ಮೇ 4ರ ವರೆಗೆ ಪ್ರತಿದಿನ ರಾತ್ರಿ 9ರಿಂದ ಬೆಳಗ್ಗೆ 6ರ ವರೆಗೆ ಕಫ್ರ್ಯೂ ಜಾರಿಯಲ್ಲಿರಲಿದೆ. ಹೀಗಾಗಿ, ಪ್ರತಿಯೊಬ್ಬರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ಜಿ.ಅನುರಾಧ ಉಪಸ್ಥಿತರಿದ್ದರು.

https://www.suddikanaja.com/2020/11/08/suspend-meacom/

error: Content is protected !!