ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಲಸಿಕೆ ಪಡೆಯುವುದಕ್ಕೋಸ್ಕರ ಶನಿವಾರವೂ ಜನರ ಸರದಿ ಮುಂದುವರಿದಿದೆ.
READ | ಕೋವಿಡ್ ವಾರ್ ರೂಂ, ಈ ನಂಬರಿಗೆ ಕರೆ ಮಾಡಿದರೆ ಸಿಗಲಿದೆ ಸಹಾಯ
ನಗರದ ಕುವೆಂಪು ರಸ್ತೆಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಬೆಳಗ್ಗೆಯಿಂದಲೇ ಲಸಿಕೆಗೋಸ್ಕರ ಜನರ ಸರದಿ ಇದೆ.
ಬೆಳಗ್ಗೆ 9 ಗಂಟೆಗೆ ಲಸಿಕೆಗೋಸ್ಕರ ಟೋಕನ್ ಪಡೆಯಬೇಕು. ಹತ್ತು ಗಂಟೆ ಬಳಿಕ ಲಸಿಕೆ ನೀಡುವುದು ಶುರುವಾಗುತ್ತದೆ. ಆದರೆ, ಜನ ಟೋಕನ್ ಸಿಗುವುದಿಲ್ಲ ಎಂಬ ಆತಂಕದ ನಡುವೆ ಬೆಳಗ್ಗೆಯೇ ಕ್ಯೂ ನಿಲ್ಲುತಿದ್ದಾರೆ.
ಬುಧವಾರ ಮತ್ತು ಗುರುವಾರ ಲಸಿಕೆ ಇಲ್ಲದ ಕಾರಣದಿಂದ ಹಲವೆಡೆ ನೀಡಿಲಿಲ್ಲ. ಶುಕ್ರವಾರದಿಂದ ಮತ್ತೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗಿದೆ. ನಿತ್ಯ ಇನ್ನೂರು ಲಸಿಕೆಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತಿದೆ. ಆದರೆ, ಜನ ಅದಕ್ಕಿಂತ ಹೆಚ್ಚಿಗೆ ಬರುತಿದ್ದಾರೆ.