ಭದ್ರಾವತಿಯಲ್ಲಿ ನಡೀತು ಕೊರೊನಾ ಬಗ್ಗೆ ನಡೀತು ಪ್ರಮುಖ ಮೀಟಿಂಗ್, ನೀಡಲಾದ ಸೂಚನೆಗಳೇನು?

 

 

ಸುದ್ದಿ‌ ಕಣಜ.ಕಾಂ
ಭದ್ರಾವತಿ: ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು. ಈ ವೇಳೆ ತಾಲೂಕಿನಲ್ಲಿ ಏರುಗತಿಯಲ್ಲಿರುವ ಕೊರೊನಾ ಪ್ರಕರಣಗಳ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

https://www.suddikanaja.com/2021/04/26/oxygen-plants-in-bhadravathi-and-sagar/

ಕೊರೊನಾ ಗ್ರಾಫ್ ನೋಡಿದರೆ ಭದ್ರಾವತಿ ತಾಲೂ ಕಿನಲ್ಲಿ ಕೋವಿಡ್ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿವೆ. ಇದು ಆತಂಕದ ವಿಚಾರವಾಗಿದ್ದು, ಸೋಂಕು ತಡೆಗೆ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.
ತಾಲೂಕು ಸರ್ಕಾರಿ ಆಸ್ಪತ್ರೆಯ 100 ಬೆಡ್‌ಗಳಲ್ಲಿ 50 ಕೋವಿಡ್ ಗೆ ಮೀಸಲು ಇಡಲಾಗಿದೆ.
ವಿಐಎಸ್‌.ಎಲ್ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.

300 ಸಿಲಿಂಡರ್ ಗ್ಯಾಸ್ ಭರ್ತಿಗೆ ಮಾಸಿಕ 10 ಲಕ್ಷ ರೂಪಾಯಿ ಹಾಗೂ ಪ್ರತಿ ದಿನ ವಿದ್ಯುತ್ ವೆಚ್ಚಕ್ಕಾಗಿ 2 ಲಕ್ಷ ರೂಪಾಯಿ ಬೇಕು.
ಬಿ.ವೈ.ರಾಘವೇಂದ್ರ, ಸಂಸದರು

ಅಗತ್ಯವಿದ್ದಲ್ಲಿ ಎಂಪಿಎಂ‌ ಆಸ್ಪತ್ರೆಯೂ ಕೋವಿಡ್ ಗೆ ಬಳಕೆ | ಬರುವ ದಿನಗಳಲ್ಲಿ ಅಗತ್ಯವಿದ್ದಲ್ಲಿ ಎಂಪಿಎಂ ಆಸ್ಪತ್ರೆಯನ್ನು ಬಳಸಿಕೊಳ್ಳಲಾಗುವುದು.
ಸೋಂಕು ತೀವ್ರಗೊಂಡ ಆಕ್ಸಿಜನ್ ಅಗತ್ಯ ಇರುವವರಿಗೆ ವಿ.ಐ.ಎಸ್‌.ಎಲ್ ಕಾರ್ಖಾನೆಯ ಗ್ಯಾಸ್ ಪ್ಲಾಂಟ್ ಜತೆ ಎಂಎಸ್.ಪಿಎಲ್ ಜತೆ ಹೊಂದಾಣಿಕೆ ಮಾಡಿಕೊಂಡು ಸಿಲಿಂಡರ್ ಮೂಲಕ ಜಿಲ್ಲೆಯಾದ್ಯಂತ ಆಕ್ಸಿಜನ್ ಸಿಲಿಂಡರ್ ತಲುಪಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಮಾಹಿತಿ‌ ನೀಡಿದರು.
ಸಭೆಯಲ್ಲಿ ಉಪ ವಿಭಾಗ ಅಧಿಕಾರಿ ಡಾ.ಟಿ.ವಿ.ಪ್ರಕಾಶ್, ತಹಸೀಲ್ದಾರ್ ಸಂತೋಷ್ ಕುಮಾರ್, ಡಿವೈಎಸ್‌.ಪಿ ಕೃಷ್ಣಮೂರ್ತಿ, ಮನೋಹರ್, ತಾಲೂಕು ವೈದ್ಯಾಧಿಕಾರಿ ಅಶೋಕ್‌ ಕುಮಾರ್, ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಲ್ಲಪ್ಪ, ಬಿಇಒ ಸೋಮಶೇಖರ್, ಭದ್ರಾವತಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಭಾಕರ್, ಮಂಗೋಟೆ ರುದ್ರೇಶ್, ಬಿ.ಕೆ.ಶ್ರೀನಾಥ್‌ ಉಪಸ್ಥಿತರಿದ್ದರು.

https://www.suddikanaja.com/2021/02/07/31-gas-cylinder-detained-two-person-arrest-in-shivamogga/

 

error: Content is protected !!