ಶಿವಮೊಗ್ಗ ನಗರದಲ್ಲಿ ಭಾರೀ ಟ್ರಾಫಿಕ್ ಜಾಮ್, ಈ ರಸ್ತೆಗಳು ಲಾಕ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ಹೇರಿದರೂ ನಗರದಲ್ಲಿ‌ ವಾಹನ ಸವಾರರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಇದರ ಪರಿಣಾಮ ಮಂಗಳವಾರ ಎಲ್ಲ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ.

READ | ಶಿವಮೊಗ್ಗ ನಗರದ ಎಲ್ಲ‌ ರಸ್ತೆಗಳಲ್ಲಿ ಪೊಲೀಸರು, ಬಿಗಿ ಭದ್ರತೆ, ಎಲ್ಲೆಲ್ಲಿ ಖಾಕಿ ಕಾವಲು?, ಟ್ರಾಫಿಕ್ ಸ್ಟೇಷನ್ ಮುಂದೆ ಆಟೋಗಳ ಕ್ಯೂ

ಅದರಲ್ಲೂ ನೆಹರೂ ರಸ್ತೆ, ಅಮೀರ್ ಅಹ್ಮದ್ ವೃತ್ತದಲ್ಲಿ ಲಾಕ್ ಡೌನ್ ಜಾರಿಗೆ ತಂದ ದಿನದಿಂದ ನಿರಂತರ ಈ ಸಮಸ್ಯೆ ಆಗುತ್ತಿದೆ. ಜತೆಗೆ, ಕುವೆಂಪು ರಸ್ತೆಯಲ್ಲೂ ಸಂಚಾರ ವ್ಯತ್ಯಯವಿದೆ.
ಯಾವ ರಸ್ತೆಗಳು ಲಾಕ್ | ಬಿ.ಎಚ್.ರಸ್ತೆ, ಓ.ಟಿ.ರಸ್ತೆ, ನೆಹರೂ ರಸ್ತೆ, ಜೈಲು ರಸ್ತೆ, ದುರ್ಗಿಗುಡಿ ರಸ್ತೆಯಿಂದ ಜೈಲು ವೃತ್ತ ಸಂಪರ್ಕದ ರಸ್ತೆ ಈ ಪ್ರಮುಖ ಎಸ್ತೆಗಳನ್ನು ಬಂದ್ ಮಾಡಲಾಗಿದೆ. ಸಾಗರ ರಸ್ತೆಯಲ್ಲಿ ಬ್ಯಾರಿಕೆಡ್ ಅಳವಡಿಸಲಾಗಿದೆ.

error: Content is protected !!