ಭದ್ರಾವತಿಯಲ್ಲಿ ಅಡಕೆ ಕಳ್ಳರ ಬಂಧನ, ಕದ್ದ ಅಡಕೆ ಎಷ್ಟು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಭದ್ರಾವತಿ: ಮೂರು ಚೀಲ ಅಡಕೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತರೀಕೆರೆ ರಸ್ತೆಯ ಶಿವನಿ ಕ್ರಾಸ್ ಬಳಿ ಶೆಡ್ ನಲ್ಲಿದ್ದ ಮೂರು ಚೀಲ ಅಡಕೆಯನ್ನು ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಹಳೇ ನಗರದ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

READ | ಮತ್ತಷ್ಟು ಕಠಿಣ ರೂಲ್ಸ್, ಮೇ 10 ರಿಂದ ಕರ್ನಾಟಕ ಲಾಕ್, ಏನಿರಲಿದೆ, ಏನಿರಲ್ಲ? ಯಾವೆಲ್ಲ ನಿಯಮಗಳು ಕಠಿಣ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

ಬಂಧಿತರು, ಜಪ್ತಿಯಾದ ಅಡಕೆ | ಹನುಮಂತಪ್ಪ ಶೆಡ್ ನಿವಾಸಿಗಳಾದ ಅಮೀಲ್ (20), ಸಲ್ಮಾನ್ ಖಾನ್(26), ಜಾವೇದ್ (48), ಎಂಎಂ ಕಾಂಪೌಂಡ್ ನಿವಾಸಿ ಪುನೀತ್ (23) ಬಂಧಿತರು. ಇವರಿಂದ 67,200 ರೂಪಾಯಿ ಮೌಲ್ಯದ ಮೂರು ಚೀಲ ಅಡಕೆಯನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆ | ಭದ್ರಾವತಿ ಹಳೇ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ಸಿಬ್ಬಂದಿ ಹಾಲಪ್ಪ, ಗಿರಿಧರ್, ಮಹ್ಮದ್ ಫಿರೋಜ್ ಅವರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.

https://www.suddikanaja.com/2021/01/28/areca-nut-added-in-drugs-category-blunder-by-krishi-marata-vahini/

error: Content is protected !!