ಸಾವಿರ ಗಡಿ ದಾಟಿದ ಕೊರೊ‌ನಾ ಸೋಂಕು, ಶಿವಮೊಗ್ಗ ಟ್ರಿಪಲ್, ಭದ್ರಾವತಿಯಲ್ಲಿ ಡಬಲ್ ಸೆಂಚ್ಯೂರಿ, ಬೇರೆ ತಾಲೂಕಿನಲ್ಲಿ ವರದಿ ಇಲ್ಲಿದೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಸಲ ಒಂದೇ ದಿನ ಪಾಸಿಟಿವ್ ಸಂಖ್ಯೆ ಸಾವಿರ ಗಡಿ ದಾಟಿದೆ. ಹನ್ನೊಂದು ಜನ ಮೃತಪಟ್ಟಿದ್ದಾರೆ.

READ | ಹೊರಗೆ ಬಂದರೆ ಬೈಕ್‌ ಸೀಜ್ ಪಕ್ಕಾ, ಎಲ್ಲ ಸರ್ಕಲ್ ಗಳು ಕ್ಲೋಸ್, ಖಾಕಿ ಸರ್ಪಗಾವಲಲ್ಲಿ ಹೇಗಿದೆ ಮೊದಲ ದಿನದ ಲಾಕ್ ಡೌನ್?

ಸೋಮವಾರ 1049 ಜನರಲ್ಲಿ ಕೊರೊನಾ ಪಾಸಿಟಿಯ ಬಂದಿದ್ದು, 283 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
2,497 ಮಾದರಿಗಳನ್ನು ಸಂಗ್ರಹಿಸಲಾಗಿದೆ. 1,616 ವರದಿಗಳು ನೆಗೆಟಿವ್ ಬಂದಿವೆ. ಜತೆಗೆ, ಇದೇ ಮೊದಲ ಸಲ ಒಂದೇ ದಿನ 62 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 12 ಕಾಲೇಜು ಸಿಬ್ಬಂದಿಗೂ ಕೊರೊನಾ ವೈರಸ್ ಅಟ್ಯಾಕ್ ಮಾಡಿದೆ.
ಸಕ್ರಿಯ ಪ್ರಕರಣದಲ್ಲಿ ಏರಿಕೆ | ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 5,363ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 580, ಡಿಸಿಎಚ್‌ಸಿನಲ್ಲಿ 77, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 143, ಖಾಸಗಿ ಆಸ್ಪತ್ರೆಯಲ್ಲಿ 446, ಹೋಂ ಐಸೋಲೇಷನ್‌ ನಲ್ಲಿ 3,671, ಟ್ರಿಯೇಜ್‌ ನಲ್ಲಿ 446 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ ಸೋಂಕು ಸ್ಫೋಟಗೊಂಡಿದ್ದು, 329 ಜನರಲ್ಲಿ ಪಾಸಿಟಿವ್ ಬಂದಿದೆ. ಭದ್ರಾವತಿ 246, ಶಿಕಾರಿಪುರ 75, ತೀರ್ಥಹಳ್ಳಿ 49, ಸೊರಬ 114, ಸಾಗರ 167, ಹೊಸನಗರ 54, ಬಾಹ್ಯ ಜಿಲ್ಲೆಯ 15 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/05/07/corona-death-increase-in-shivamogga/

error: Content is protected !!