ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲ್ಲೂಕಿನಲ್ಲಿ ಹಿಂದೂ ವೃದ್ಧೆಯೊಬ್ಬರಿಗೆ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಸೇರಿದಂತೆ ಯಾರೂ ಮುಂದೆ ಬರದಿದ್ದಾಗ ಮುಸ್ಲಿಂ ಯುವಕರ ತಂಡವೊಂದು ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನಡೆಸಿದ ಘಟನೆ ಸೋಮವಾರ ನಡೆದಿದೆ.
ಈ ಸಂದರ್ಭದಲ್ಲಿ ಇಲ್ಲಿನ ಸಮಾಜ ಸೇವಕ ಮಹಮ್ಮದ್ ಇರ್ಫಾನ್ ಮತ್ತು ಅವರ ಸ್ನೇಹಿತರ ತಂಡ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ. ತಂಡದಲ್ಲಿಅಸ್ಲಾಂ, ಇಮ್ರಾನ್, ನವೀದ್, ರಹಮತ್, ಮೌಲಾನ ಅಶ್ವಕ್, ಮೌಲಾನಾ ಇಬ್ರಾಹಿಂ ಇದ್ದರು.