ಶಿವಮೊಗ್ಗ ನಗರ 4 ದಿನ ಕಂಪ್ಲೀಟ್ ಲಾಕ್ ಡೌನ್, ಏನಿರುತ್ತೆ, ಏನಿರಲ್ಲ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಆ ವೇಳೆಯಲ್ಲಿ ಯಾರೂ ಹೊರಗಡೆ ಓಡಾಡುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

https://www.suddikanaja.com/2021/04/26/covid-19-karnataka-government-announce-for-14-days-lockdown/

ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರಿಂದ 15ರ ವರೆಗೆ ಶಿವಮೊಗ್ಗ ನಗರಕ್ಕೆ ಸೀಮಿತವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ ಎಂದು ಹೇಳಿದರು.
ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡಲಾಗುವುದು. ಹೀಗಾಗಿ, ಸಾರ್ವಜನಿಕರು ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಓಡಾಡಬಾರದು ಎಂದು ತಿಳಿಸಿದರು.

VIDEO REPORT

ವ್ಯಾಪಾರಿಗಳದ್ದೂ ಒಪ್ಪಿಗೆ | ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುತ್ತಿದ್ದು ನಿಯಂತ್ರಿಸುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಿರ್ಧಾರಕ್ಕೂ ಮುಂಚೆ ಕೈಗಾರಿಕಾ ಸಂಘ, ಗಾಂಧಿ ಬಜಾರ್ ವ್ಯಾಪಾರ ಸಂಘ, ಹೋಲ್ ಸೇಲ್ ದಿನಸಿ ಹೀಗೆ ಎಲ್ಲರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಏನಿರಲಿದೆ | ಗುರುವಾರದಿಂದ ಭಾನುವಾರದವರೆಗೆ ಮೆಡಿಕಲ್, ಸ್ಥಳೀಯವಾಗಿ ದಿನಸಿ, ತರಕಾರಿ ಲಭ್ಯ, ಹೋಟೆಲ್‍ಗಳಲ್ಲಿ ಪಾರ್ಸಲ್ ಲಭ್ಯ.
ಏನಿರಲ್ಲ | ಎಪಿಎಂಸಿ, ಕೈಗಾರಿಕೆ, ಬೆಂಗಳೂರಿನಿಂದ ಯಾವ ವಾಹನಕ್ಕೂ ಜಿಲ್ಲಾ ಪ್ರವೇಶವಿಲ್ಲ, ವಾಹನಗಳ ಬಳಕೆಯೂ ನಿಷೇಧ, ಗಾಂಧಿ ಬಜಾರ್, ಹೋಲ್ ಸೇಲ್ ಮಾರಾಟ.

https://www.suddikanaja.com/2021/05/09/full-power-to-police-in-lock-down/

error: Content is protected !!