ಇದರಿಂದಾಗಿ, ಸೋಂಕಿತರನ್ನು ತುರ್ತು ಸಂದರ್ಭಗಳಲ್ಲಿ ಕರೆದೊಯ್ಯಲು ಬರುವ ಆಂಬ್ಯುಲೆನ್ಸ್ ಗಳು ಪರದಾಡುತ್ತಿವೆ. ಒಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳಿಂದಾಗಿ ಎಲ್ಲೆಡೆ ರಸ್ತೆಗಳನ್ನು ಅಗೆದು ಸಂಚಾರ ಸ್ಥಗಿತಗೊಳಿಸಲಾಗಿದೆ. ಜತೆಗೆ, ಲಾಕ್ ಡೌನ್ ನಿಂದಾಗಿ ಬಡಾವಣೆಯ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಭಾರಿ ಸಮಸ್ಯೆ ಆಗುತ್ತಿದೆ. ಮುಖ್ಯ ರಸ್ತೆಗಳು ಸಂಚಾರಕ್ಕೆ ಮುಕ್ತವಾಗಿವೆ. ಆದರೆ, ಆಂಬ್ಯುಲೆನ್ಸ್‌ನವರಿಗೆ ಒಳ ರಸ್ತೆಗಳು ಬಂದ್ ಇರುವುದರಿಂದ ಬಡಾವಣೆಯೊಳಗಿನ ಸಂತೃಸ್ತರ ಮನೆಗೆ ಹೋಗುವ ಹೊತ್ತಿಗೆ ವಿಳಂಬ ಆಗುತ್ತಿದೆ.
ತುರ್ತು ಸಂದರ್ಭಗಳಲ್ಲಿ ಓಡಾಟಕ್ಕೆ ಅನುವು ಮಾಡಿಕೊಡಲು ಬಂದ್ ಮಾಡಿರುವ ಜಾಗಗಳಲ್ಲಿ ಯಾರೂ ಇಲ್ಲ. ಈ ಕ್ರಮಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತಿದ್ದಾರೆ.