‘ನಿಮ್ಮಲ್ಲಿ ನೋಟು ಮುದ್ರಿಸುವ ಯಂತ್ರವಿಲ್ಲ, ಎಣಿಸುವ ಮೆಷಿನ್ ಇದೆ’

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪ ಅವರು ಪರಿಹಾರ ನೀಡುವ ಕುರಿತು ಅತ್ಯಂತ ಬಾಲಿಶ ಹೇಳಿಕೆ ನೀಡಿದ್ದಾರೆ. ಅವರಲ್ಲಿ ಪ್ರಿಂಟ್ ಮಾಡುವ ಯಂತ್ರವಿಲ್ಲ, ಎಣಿಕೆ ಮಾಡುವ ಮೆಷಿನ್ ಇದೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್ ಲೇವಡಿ ಮಾಡಿದ್ದಾರೆ.

READ | ಶಿವಮೊಗ್ಗ ನಗರ 4 ದಿನ ಕಂಪ್ಲೀಟ್ ಲಾಕ್ ಡೌನ್, ಏನಿರುತ್ತೆ, ಏನಿರಲ್ಲ?

ಜನರು ಕಟ್ಟಿದ ತೆರಿಗೆ ಹಣದಲ್ಲಿ ಜನರಿಗೆ ಪರಿಹಾರ ನೀಡುವಂತೆ ವಿರೋಧ ಪಕ್ಷದ ನಾಯಕರುಗಳು ಆಗ್ರಹಿಸುವುದು ತಪ್ಪೇ? ಎಂದು ಹೇಳಿದ್ದಾರೆ.

ಅತ್ಯಂತ ಅವೈಜ್ಞಾನಿಕವಾಗಿ ಲಾಕ್ ಡೌನ್ ಮಾಡಲಾಗುತ್ತಿದೆ. ದುಡಿದು ತಿನ್ನುವ ವರ್ಗ ಭಾರಿ ಸಂಕಷ್ಟದಲ್ಲಿದೆ. ಪರಿಸ್ಥಿತಿ ಹೀಗಿರುವಾಗ, ಪರಿಹಾರ ಕೇಳಿದ್ದಕ್ಕೆ ಈಶ್ವರಪ್ಪ ಅವರು ಸರ್ಕಾರದ ಬಳಿಯೇನು ನೋಟು ಪ್ರಿಂಟ್ ಮಾಡುವ ಯಂತ್ರವಿದೆಯೇ ಎಂದು ಅಸಡ್ಡೆಯಿಂದ ಹೇಳಿದ್ದಾರೆ ಎಂದು ಟೀಕಿಸಿದರು.

error: Content is protected !!