ಸುದ್ದಿ ಕಣಜ.ಕಾಂ
ಭದ್ರಾವತಿ: ಚಿಕಿತ್ಸೆಗೆಂದು ಬಂದಿದ್ದ ಯುವತಿಯ ಬಟ್ಟೆ ಬಿಚ್ಚುವಂತೆ ಹೇಳಿದ್ದಲ್ಲದೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಭದ್ರಾವತಿ ಹಳೆಯ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಖಾಜಿ ಮೊಹಲ್ಲಾ ಮೂಲವ್ಯಾದಿ ಕ್ಲಿನಿಕ್ ಇದ್ದು, ಯುವತಿಯೊಬ್ಬಳು ಚಿಕಿತ್ಸೆಗೆಂದು ಬಂದಿದ್ದಳು. ಆಗ ಕಿರುಕುಳ ನೀಡಿದ್ದು, ಆಗ ವೈದ್ಯರು ಪಾನಮತ್ತ ಸ್ಥಿತಿಯಲ್ಲಿದ್ದರೆಂದು ಯುವತಿ ದೂರಿದ್ದಾಳೆ.
ಹಳೆಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೈದ್ಯರನ್ನು ವಶಕ್ಕೆ ಪಡೆಯಲಾಗಿದೆ.