BREAKING NEWS | ಒಂದೇ ದಿನ‌ 26 ಜನರ ಬಲಿ ಪಡೆದ ಕೊರೊನಾ, ಶಿವಮೊಗ್ಗ ಪಾಲಿಗೆ ಕರಾಳ ದಿನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಗೆ ಬುಧವಾರ ಕರಾಳ ದಿನವಾಗಿ ಮಾರ್ಪಟ್ಟಿದೆ. ಇದೇ ಮೊದಲ ಸಲ ಕೊರೊನಾದಿಂದ ಒಂದೇ ದಿಮ‌ 26 ಜನ ಮೃತಪಟ್ಟಿದ್ದು, ಇಲ್ಲಿಯವರೆಗೆ ಸಾವಿನ ಸಂಖ್ಯೆ 542ಕ್ಕೆ ಏರಿಕೆಯಾಗಿದೆ.

READ | ನಾಳೆಯಿಂದ 4 ದಿನದ ಲಾಕ್ ಡೌನ್ ಹೇಗಿರಲಿದೆ? ಹಬ್ಬಗಳಿಗೇನು ನಿಯಮ?

ಬುಧವಾರ 1067 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, 40 ವಿದ್ಯಾರ್ಥಿಗಳು, 10 ಸಿಬ್ಬಂದಿ ಇದ್ದಾರೆ. 597 ಜನ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದ್ದು, ಸಕ್ರಿಯ ಪ್ರಕರಣಗಳ‌ ಸಂಖ್ಯೆ 6,514ಕ್ಕೆ‌ ಏರಿಕೆ ಆಗಿದೆ. ಸೋಂಕಿತರು ಮೆಗ್ಗಾನ್ ನಲ್ಲಿ 566, ಡಿಸಿಎಚ್‌ಸಿನಲ್ಲಿ 337, ಕೋವಿಡ್‌ ಕೇರ್‌ ಸೆಂಟರ್‌ ನಲ್ಲಿ 236, ಖಾಸಗಿ ಆಸ್ಪತ್ರೆಯಲ್ಲಿ 492, ಹೋಂ ಐಸೋಲೇಷನ್‌ ನಲ್ಲಿ 4,154, ಟ್ರಿಯೇಜ್‌ ನಲ್ಲಿ 729 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗದಲ್ಲಿ‌ 333 ಭದ್ರಾವತಿ 177, ಶಿಕಾರಿಪುರ 81, ತೀರ್ಥಹಳ್ಳಿ 78, ಸೊರಬ 107, ಸಾಗರ 193, ಹೊಸನಗರ 59, ಬಾಹ್ಯ ಜಿಲ್ಲೆಯ 39 ಜನರಲ್ಲಿ ಸೋಂಕು ಪತ್ತೆಯಾಗಿದೆ.

https://www.suddikanaja.com/2021/05/09/retail-sale-ban-in-apmc-shivamogga/

error: Content is protected !!