ಮೆಗ್ಗಾನ್ ಶವಾಗಾರದ ಬಳಿ‌ ಆಂಬ್ಯುಲೆನ್ಸ್ ದಾದಾಗಿರಿ!, ಕೋವಿಡ್ ವಾರ್ಡ್ ನಲ್ಲಿ ನೋ ಎಂಟ್ರಿ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದಿಂದ ಶವ ಕೊಂಡೊಯ್ಯಲು ಹಣಕ್ಕಾಗಿ ಡಿಮ್ಯಾಂಡ್ ಮಾಡಲಾಗುತ್ತಿದೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡು ನೊಂದಿರುವವರ ಮೇಲೆ ದಾದಾಗಿರಿ ಮಾಡಲಾಗುತ್ತಿದೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.

READ | ಶಿವಮೊಗ್ಗದಲ್ಲಿ ಕೊರೊನಾದಿಂದ ಸಾಯುವವರ ಲೆಕ್ಕದಲ್ಲಿ ಎಡವಟ್ಟು, ಆಡಳಿತರೂಢ ಪಕ್ಷದ ಶಾಸಕರ‌ ಗಂಭೀರ ಆರೋಪ

ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಆಂಬ್ಯುಲೆನ್ಸ್ ನವರಿಂದ ಹಣ ವಸೂಲಿ ಮಾಡುತ್ತಿರುವುದನ್ನು ನಿಯಂತ್ರಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಮೆಗ್ಗಾನ್‍ನಲ್ಲಿ ಮೃತರನ್ನು ಕೊಂಡೊಯ್ಯಲು ಆಂಬ್ಯುಲೆನ್ಸ್ ಗಳಿಗೆ ದರ ನಿಗದಿ ಮಾಡಲಾಗಿದೆ. ದರ ಪಟ್ಟಿಯನ್ನು ಮೆಗ್ಗಾನ್‍ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದರು. ಯಾವುದೇ ಕಾರಣಕ್ಕೂ ನಿಗದಿಗಿಂತ ಅಧಿಕ ದರ ವಿಧಿಸುವಂತಿಲ್ಲ.

https://www.suddikanaja.com/2021/05/15/cm-bs-yadiyurappa-video-conference-with-senior-doctors/

ದುರ್ಬಳಕೆ ಬಗ್ಗೆ ಮೂರು ಕೇಸ್ ದಾಖಲು‌ |ರೆಮಿಡಿಸಿವಿರ್ ಇಂಜೆಕ್ಷನ್ ದುರ್ಬಳಕೆ ಕುರಿತಾಗಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಡಿಸಿ ಮಾಹಿತಿ ನೀಡಿದರು.
ಕೋವಿಡ್ ವಾರ್ಡ್ ನಲ್ಲಿ ನೋ ಎಂಟ್ರಿ | ಕೋವಿಡ್ ಸೋಂಕಿತರ ವಾರ್ಡ್ ಒಳಗೆ ಸಂಬಂಧಿಕರಿಗೆ ಯಾವುದೇ ಕಾರಣಕ್ಕೂ ಪ್ರವೇಶ ನೀಡಲಾಗುವುದಿಲ್ಲ. ಇದನ್ನು ಅಧಿಕಾರಿಗಳಿಗೂ ಸೂಚಿಸಲಾಗಿದೆ. ಕೋವಿಡ್ ಪೀಡಿತರ ಅಗತ್ಯಗಳನ್ನು ನೋಡಿಕೊಳ್ಳಲು ಬೇಕಾದ ಸಿಬ್ಬಂದಿಯನ್ನು ಸ್ಥಳೀಯವಾಗಿ ನೇಮಿಸುವಂತೆ ಸಚಿವ ಈಶ್ಚರಪ್ಪ ಅವರು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು‌.

https://www.suddikanaja.com/2021/04/30/mandatory-to-display-duty-doctor-names-before-ward-board/

error: Content is protected !!