
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ನವೆಂಬರ್ 20 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಎ.ಎಫ್-1, 2, ಮತ್ತು 3 ರ ಫೀಡರ್ ಗಳಲ್ಲಿ ಮಾರ್ಗಮುಕ್ತತೆ ನೀಡಬೇಕಾಗಿದೆ. ಈ ಕಾರಣದಿಂದಾಗಿ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
READ | ವಿದ್ಯಾರ್ಥಿಗಳೇ ನಿರ್ಮಿಸಿದ 15 ವರ್ಷಗಳ ಅಡಿಕೆ ತೋಟ ವೀಕ್ಷಿಸಿದ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಶ್ರೀರಾಂಪುರ, ಭೂಮಿಕಾ ಇಂಡಸ್ಟ್ರೀಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಸ್ಟೇಡಿಯಂ, ಹಾಲದೇವರ ಹೊಸೂರು, ಗುಡ್ಡದ ಹರಕೆರೆ, ಶಕ್ತಿಧಾಮ, ಪೊಲೀಸ್ ಲೇಔಟ್, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ಭೋವಿ ಕಾಲೋನಿ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದ ಹರಕೆರೆ, ವೀರಗಾರನಭೈರನಕೊಪ್ಪ, ಆಲ್ಕೋಳ ಸರ್ಕಲ್, ಎಬಿವಿಪಿ ಲೇಔಟ್, ಎಸ್.ವಿ.ಬಡಾವಣೆ, ಹರ್ಷ ಫರ್ನ್ ಹೋಟೆಲ್, ಗಾಡಿಕೊಪ್ಪ, ಮಲ್ಲಿಗೇನಹಳ್ಳಿ, ಶರಾವತಿ ದಂತ ವೈದ್ಯಕೀಯ ಕಾಲೇಜು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಕುಂಸಿ ವ್ಯಾಪ್ತಿಯ ಹಲವೆಡೆ ಪವರ್ ಕಟ್
ಕುಂಸಿ ಉಪವಿಭಾಗದ ಶ್ರೀರಾಂಪುರ ಶಾಖಾ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಫ್ಲೈ ಓವರ್ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಆಲ್ಕೋಳ 110/1 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕೆಳಕಂಡ ಪ್ರದೇಶಗಳಲ್ಲಿ ನ.20ರಂದು ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?
ಶ್ರೀರಾಂಪುರ, ಭೂಮಿಕಾ ಅಲಾಯ್ಸ್, ಪೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಕ್ಲಬ್, ಆಲದೇವರಹೊಸೂರು, ಪೊಲೀಸ್ ಲೇಔಟ್, ಗುಡ್ಡದಹರಕೆರೆ, ಇಂದಿರಾ ಬಡಾವಣೆ, ಗಿರಿದೀಪಮ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.