ಅದ್ಧೂರಿ ಮದುವೆಗೆ ಬ್ರೇಕ್, ಅಧಿಕಾರಿಗಳ ಸಮ್ಮುಖದಲ್ಲಿ ನಡೀತು ಸರಳ ವಿವಾಹ

 

 

ಸುದ್ದಿ‌ ಕಣಜ.ಕಾಂ
ಶಿವಮೊಗ್ಗ: ಮದುವೆ ಸಮಾರಂಭದಲ್ಲಿ 40ಕ್ಕಿಂತ ಅಧಿಕ ಜನ ಸೇರುವಂತಿಲ್ಲ ಎಂಬ ನಿಯಮದ ನಡುವೆಯೇ ಅದ್ಧೂರಿ ವಿವಾಹಗಳು ನಡೆಯುತ್ತಿವೆ. ಆದರೆ, ತಾಲೂಕಿನ ಸಂತೇಕಡೂರಿನಲ್ಲಿ ನಡೆಯಬೇಕಿದ್ದ ಅದ್ಧೂರಿ ವಿವಾಹವೊಂದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

READ | ಶಿವಮೊಗ್ಗದ ಲಸಿಕೆ ಕೇಂದ್ರದಲ್ಲಿ ಬಿಜೆಪಿ-ಕಾಂಗ್ರೆಸ್ ವ್ಯಾಕ್ಸಿನ್ ವಾರ್, ಕಾರಣವೇನು?

ಮದುವೆ ಮನೆಯವರು 40 ಜನರಿಗಷ್ಟೇ ಸೇರಿಸಿ ವಿವಾಹ ಸಮಾರಂಭ ಮಾಡುವುದಾಗಿ ಪರವಾನಗಿ ಪಡೆದಿದ್ದಾರೆ. ಆದರೆ, ನೂರಕ್ಕೂ ಅಧಿಕ ಸಮಜನ ಸೇರುವಷ್ಟು ಶಾಮಿಯಾನ ಸೇರಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.
READ | ಶಿವಮೊಗ್ಗ, ಸಾಗರದಲ್ಲಿ ಸೋಂಕು‌ ಉಲ್ಬಣ, ಭದ್ರಾವತಿ, ಶಿಕಾರಿಪುರ, ಸೊರಬದಲ್ಲಿ ಶತಕ, ಮುಂದುವರಿದ ಸಾವು

ದಾಳಿ ನಡೆಸಿ ಶಾಮೀಯಾನ ತೆಗೆಸಿದ ಅಧಿಕಾರಿಗಳು
| ಮದುವೆ ಮನೆಗೆ ಭೇಟಿ ನೀಡಿದ ತಹಸೀಲ್ದಾರ್‌ ಎನ್‌.ಜೆ.ನಾಗರಾಜ್‌ ನೇತೃತ್ವದ ತಂಡ ಶಾಕ್ ನೀಡಿದ್ದಾರೆ. ಮಾರ್ಗಸೂಚಿಗೆ ವಿರುದ್ಧವಾಗಿ ವಿವಾಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಮಿಯಾನ ತೆಗೆಸಿ ಸರಳ ವಿವಾಹ ಮಾಡಿಸಲಾಗಿದೆ. ತಂಗಾನಗರ ಪಿಎಸ್‌ಐ ತಿರುಮಲೇಶ್‌, ಕಂದಾಯ ಅಧಿಕಾರಿ ಅರುಣ್‌ ಕುಮಾರ್‌ ಇತರರು ಉಪಸ್ಥಿತರಿದ್ದರು.

https://www.suddikanaja.com/2021/04/29/groom-died-due-to-corona/

error: Content is protected !!