ಇನ್ನೂ ಕಂಟ್ರೋಲ್ ಗೆ ಬರದ ಕೊರೊನಾ ಡೆತ್ ರೇಟ್, ಸಕ್ರಿಯ ಪ್ರಕರಣದಲ್ಲಿ ಇಳಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾದರೂ ಸಾವಿನ ಸಂಖ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಭಾನುವಾರ 7,103ರಷ್ಟಿತ್ತು. ಆದರೆ, ಸೋಮವಾರ 7,024ಕ್ಕೆ ಇಳಿಕೆಯಾಗಿದೆ‌. ಆದರೆ, ಇಂದು ಕೊರೊನಾ 16 ಜನರನ್ನು ಬಲಿ ಪಡೆದಿದೆ.

READ | ಪಂಚಾಯಿತಿ ಸಿಬ್ಬಂದಿಗೂ ಕೊರೊನಾ ವಾರಿಯರ್ಸ್‌ ಗರಿ, ನೀಡಲಾದ ಜವಾಬ್ದಾರಿಗಳೇನು ಗೊತ್ತಾ?

558 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 21 ವಿದ್ಯಾರ್ಥಿಗಳು, 1 ಕಾಲೇಜು ಸಿಬ್ಬಂದಿ ಇದ್ದಾರೆ. 637 ಜನ ಗುಣಮುಖರಾಗಿದ್ದಾರೆ.
2,841 ಮಾದರಿಯನ್ನು ಪಡೆದಿದ್ದು, 945 ನೆಗೆಟಿವ್ ಬಂದಿವೆ.
ಮೆಗ್ಗಾನ್ ನಲ್ಲಿ 615 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದಂತೆ ಡಿಸಿಎಚ್‌ಸಿಯಲ್ಲಿ 382, ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ 1,169, ಖಾಸಗಿ ಆಸ್ಪತ್ರೆಯಲ್ಲಿ 946, ಹೋಮ್ ಐಸೋಲೇಷನ್‌ ನಲ್ಲಿ 3,267, ಟ್ರಿಯೇಜ್‌ ನಲ್ಲಿ 645 ಜನ ಸೋಂಕಿತರಿದ್ದಾರೆ.
ತಾಲೂಕುವಾರು ವರದಿ | ಶಿವಮೊಗ್ಗ 148, ಭದ್ರಾವತಿ 127, ತೀರ್ಥಹಳ್ಳಿ 42, ಶಿಕಾರಿಪುರ 110, ಸಾಗರ 24, ಹೊಸನಗರ 24, ಸೊರಬ 75, ಬಾಹ್ಯ ಜಿಲ್ಲೆಯ 8 ಪ್ರಕರಣಗಳಿವೆ.

error: Content is protected !!