CITIZEN VOICE | ಸಾಗರದ ಈ ರಸ್ತೆಯುದ್ದಕ್ಕೂ ಸಿಗಲ್ಲ ಬೀದಿ ದೀಪ, ರಸ್ತೆಯ ಪಕ್ಕವೇ ವೇಸ್ಟ್ ಡಂಪಿಂಗ್

 

 

ಸುದ್ದಿ ಕಣಜ.ಕಾಂ
ಸಾಗರ: ಇಲ್ಲಿ ಕಂಬಗಳಿವೆ. ಅದಕ್ಕೆ ಲೈಟ್ ಗಳಿಲ್ಲ. ತ್ಯಾಜ್ಯ ವಿಲೇವಾರಿಯಂತೂ ಕೇಳುವ ಹಾಗಿಲ್ಲ. ರಾತ್ರಿ ಹೊತ್ತಲ್ಲಿ ಜೀವ ಬಾಯಲ್ಲಿ ಹಿಡಿದುಕೊಂಡೇ ಓಡಾಡುವ ಸ್ಥಿತಿ ಇಲ್ಲಿದೆ. ಅಧಿಕಾರಿಗಳು, ಜನ ಪ್ರತಿನಿಧಿಗಳಿಗೂ ಈ ವಿಚಾರ ತಿಳಿದಿದೆ. ಆದರೆ, ಸಮಸ್ಯೆ ಬಗೆಹರಿಸುವ ಇಚ್ಛಾಶಕ್ತಿ ಇಲ್ಲ. ಹೀಗಾಗಿಯೇ, ಇಲ್ಲಿಯ ಜನರ ಬದುಕು ನಿತ್ಯ ನಿಜವಾಗಿ ಮಾರ್ಪಟ್ಟಿದೆ.

sagar 2
ಯಾಳ್ಳಾರಿ ರಸ್ತೆಯಲ್ಲಿ ಬೀದಿದೀಪ ಇಲ್ಲದಿರುವುದು.

ಸಾಗರ ನಗರ ಸಭೆ ವ್ಯಾಪ್ತಿಯ 31ನೇ ವಾರ್ಡಿನ ಎಸ್.ಎನ್. ನಗರ ಐದನೇ ತಿರುವು ಯಾಳ್ಳರಿ ರಸ್ತೆಯ ಸ್ಥಿತಿ ಇದು.
ರಸ್ತೆಯ ಅಕ್ಕcitizen voice new logo 1ಪಕ್ಕ ಗಿಡ ಗಂಟಿ ಬೆಳೆದಿದ್ದು, ರಾತ್ರಿ ಹೊತ್ತಲ್ಲಿ ವಿಷ ಜಂತುಗಳ‌ ಓಡಾಟವೂ ಇದೆ. ಸರಿಯಾಗಿ ಕಸ ನಿರ್ವಹಣೆ ಮಾಡದೇ ಇರುವುದರಿಂದ‌ ಜನ ರಸ್ತೆಯ ಪಕ್ಕವೇ ಕಸ ವಿಲೇವಾರಿ ಮಾಡುತಿದ್ದಾರೆ.ಇದು ಹಲವು ಸಾಂಕ್ರಾಮಿಕ ರೋಗಗಳಿಗೆ ಜನ್ಮ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸ್ವಚ್ಛತೆಗೆ ಎಲ್ಲಿಲ್ಲದ ಆದ್ಯತೆ ನೀಡಬೇಕು.‌ ಆದರೆ, ಕಸ ಎಲ್ಲೆಂದರಲ್ಲಿ ಬಿಸಾಡುವುದರಿಂದ ಅಸ್ವಚ್ಛತೆ ತಾಂಡವವಾಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕಿದೆ.

ಕತ್ತಲಲ್ಲೇ ಪಯಣ | ಯಾಳ್ಳಾರಿ ರಸ್ತೆಯ ಅಕ್ಕ ಪಕ್ಕ 3 ರಿಂದ 5 ವಿದ್ಯುತ್ ಕಂಬಗಳಿವೆ. ಆದರೆ, ಅವುಗಳಿಗೆ ದೀಪಗಳಿಲ್ಲ. ಇದರಿಂದ ರಾತ್ರಿ ಆಗುತ್ತಿದ್ದಂತೆ ಇಲ್ಲಿ ಓಡಾಡುವುದಕ್ಕೂ ಭಯ ಪಡುವ ಸ್ಥಿತಿ ಇದೆ. ಈ ಬಗ್ಗೆ ವಿಚಾರಿಸಿದರೆ, ನಗರ ಸಭೆ ವ್ಯಾಪ್ತಿಗೆ ಬರುವುದಿಲ್ಲ. ಗ್ರಾಮ ಪಂಚಾಯಿತಿಗೆ ಒಳಪಡುತ್ತದೆ ಎನ್ನುತ್ತಾರೆ. ಗ್ರಾಪಂನವರು ತಮಗೆ ಸಂಬಂಧವೇ ಇಲ್ಲವೆಂಬಂತೆ ಮೌನ ವಹಿಸಿದ್ದಾರೆ.
NOTE | ನೀವು ಸಹ ನಿಮ್ಮೂರಿನ ಸಮಸ್ಯೆಗಳನ್ನು ಬರೆದು ವಾಟ್ಸಾಪ್ ಗೆ ಕಳುಹಿಸಿ. ಜತೆಗೊಂದು ಚಿತ್ರವಿರಲಿ.

https://www.suddikanaja.com/2020/11/20/bihar-man-found-in-sagar/

error: Content is protected !!