ಶಿವಮೊಗ್ಗದಲ್ಲೂ ನಡೀತಿದೆಯೇ ಬೆಡ್ ಬ್ಲಾಕಿಂಗ್ ದಂಧೆ, ಸಭೆಯಲ್ಲಿ ಕೇಳಿಬಂದ ಗಂಭೀರ ಆರೋಪ, ಖಾಸಗಿ ಆಸ್ಪತ್ರೆ ಕಂಟ್ರೋಲ್ 4 ಸೂತ್ರ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿದ್ದು, ಜಿಲ್ಲಾಡಳಿತ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಹೇಳಿದರು.

READ | ಜಿಲ್ಲಾಡಳಿತದಿಂದ ಒಂದು ವಾರ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಶನಿವಾರ ನಡೆದ ಖಾಸಗಿ ವೈದ್ಯರು, ಆಸ್ಪತ್ರೆಗಳ ಆಡಳಿತ ಸಂಸ್ಥೆಯ ಮುಖ್ಯಸ್ಥರೊಂದಿಗಿನ ಸಭೆಯಲ್ಲಿ ಮಾತನಾಡಿದರು.
ಬೆಡ್, ಕಳೆಬರ ನೀಡುವುದಕ್ಕೆ ಈ ಸಂದರ್ಭದಲ್ಲಿ ಅನಗತ್ಯ ಕಿರಿಕಿರಿ, ಗಲಾಟೆಗಳನ್ನು ಆಸ್ಪತ್ರೆಯವರು ಮಾಡಿಕೊಳ್ಳುವುದು ಸರಿಯಲ್ಲ. ಹೀಗಾಗಿ, ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸೂಚನೆಗಳೇನು?

  1. ಟ್ರಿಯೇಜ್ ಸೆಂಟರ್‍ನಿಂದ ವೈದ್ಯರ ಸಲಹೆಯ ಮೇರೆಗೆ ಸೋಂಕಿತರಿಗಾಗಿ ಶೇ.50ರಷ್ಟು ಬೆಡ್‍ಗಳನ್ನು ಕಾಯ್ದಿರಿಸಬೇಕು.
  2. ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಿಂದ ನೀಡುತ್ತಿರುವ ಸೌಲಭ್ಯ, ಸೋಂಕಿತರ ವಿವರ, ದಾಖಲಾತಿ, ಚಿಕಿತ್ಸೆ ಇತ್ಯಾದಿಗಳ ಮಾಹಿತಿಯನ್ನು ಫೆಸಿಲಿಟಿ ತಂತ್ರಾಂಶ (ಆಪ್)ನಲ್ಲಿ ನಮೂದಿಸಬೇಕು
  3. ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ನಿಗದಿಪಡಿಸಿರುವ ದರ, ಹಾಸಿಗೆ ಲಭ್ಯತೆ, ಮಾಹಿತಿಯನ್ನು ನೋಟಿಸ್ ಬೋರ್ಡ್‍ನಲ್ಲಿ ಅಳವಡಿಸಬೇಕು
  4. ಸೋಂಕಿತ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತಪಟ್ಟರೆ ಅವರ ಶವ ನೀಡುವುದಕ್ಕೆ ಸಂಬಂಧಿಕರೊಂದಿಗೆ ಕಿರಿಕಿರಿ ಮಾಡುವಂತಿಲ್ಲ.

https://www.suddikanaja.com/2021/03/20/creating-fraud-certificate-accused-arrested/

error: Content is protected !!