ಜಿಲ್ಲೆಯಲ್ಲಿ 6 ದಿನ ಮದ್ಯದಂಗಡಿ ಕ್ಲೋಸ್, ಪಾನ ಪ್ರಿಯರಿಗೆ ಲಾಕ್‍ಡೌನ್ ಶಾಕ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ತಡೆಯುವ ಉದ್ದೇಶದಿಂದ ಏಳು ದಿನಗಳ ಕಠಿಣ ಲಾಕ್ ಡೌನ್ ಗೆ ಜಿಲ್ಲಾಡಳಿತ ಆದೇಶಿಸಿದೆ. ಇದರ ಪರಿಣಾಮ ಮದ್ಯ ಪ್ರಿಯರಿಗೆ ಲಾಕ್ ಡೌನ್ ಬಿಸಿ ತಟ್ಟಲಿದೆ.

READ | ಜಿಲ್ಲಾಡಳಿತದಿಂದ ಒಂದು ವಾರ ಲಾಕ್ ಡೌನ್ ಪರಿಷ್ಕೃತ ಆದೇಶ, ಬ್ಯಾಂಕ್ ಗಳಿಗಿಲ್ಲ ರಜೆ

ರಾಜ್ಯ ಸರ್ಕಾರದ ನಿರ್ದೇಶನದಂತೆ ಇದುವರೆಗೆ ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ 10ರ ವರೆಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಹೊಸ ಲಾಕ್ ಡೌನ್ ನಿಯಮದನ್ವಯ ಸೋಮವಾರ ಬೆಳಗ್ಗೆ 10ರ ವರೆಗೆ ಮಾತ್ರ ಮದ್ಯ ಪ್ರಾಪ್ತವಾಗಲಿದೆ. ನಂತರ ಆರು ದಿನ ಮದ್ಯ ಸಿಗುವುದಿಲ್ಲ.

ಬಾರ್, ರೆಸ್ಟೋರೆಂಟ್, ವೈನ್ ಶಾಪ್, ಎಂಎಸ್‍ಐಎಲ್ ಸೇರಿದಂತೆ ಎಲ್ಲ ಅಂಗಡಿಗಳು ಬಂದ್ ಇರಲಿವೆ.

error: Content is protected !!