ಲಾಕ್ ಡೌನ್ ವೇಳೆ ಅಂಗಡಿ ಬೀಗ ಒಡೆದು ಕಳ್ಳತನ, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಲಾಕ್ ಡೌನ್ ವೇಳೆ ಗಾಂಧಿನಗರದ ಅಂಗಡಿಯೊಂದರ ಬೀಗ ಮುರಿದು ಕಳ್ಳತನ ಮಾಡೊರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

READ | ಕಾಲು ಮುರಿದು ರಸ್ತೆ ಬದಿ ಬಿದ್ದಿದ್ದ ನವಿಲಿಗೆ ಆಪರೇಷನ್ ಮಾಡಿದ ವೈದ್ಯರ ತಂಡ, ಇವರಿಗೊಂದು ಸೆಲ್ಯೂಟ್

ಗಾಂಧಿನಗರ ಉದ್ಯಾನ ಮುಂಭಾಗದಲ್ಲಿರುವ ಮಂಜುನಾಥ್ ಪ್ರಾವಿಜನ್ ಸ್ಟೋರ್ ಬೀಗ ಮುರಿದು ಕಳ್ಳತನ ಮಾಡಲಾಗಿದೆ.
ಸೆರೆಯಾಯ್ತು ದೃಶ್ಯ | ದಿನಸಿ ಅಂಗಡಿ ರಸ್ತೆಯ ಬದಿಯಲ್ಲೇ ಇದೆ. ಹೀಗಾಗಿ, ಯಾರ ಓಡಾಡವೂ ಸರಳವಾಗಿ ಗೊತ್ತಾಗುತ್ತದೆ. ಆದರೆ, ಕಳ್ಳರು ಲಾಕ್ ಡೌನ್ ಪ್ರಯೋಜನ ಪಡೆದು ಕೃತ್ಯ ಎಸಗಿದ್ದಾರೆ.
ಮಧ್ಯರಾತ್ರಿ ಬೈಕ್ ನಲ್ಲಿ ಇಬ್ಬರು ಅಂಗಡಿ ಮುಂದೆ ಓಡಾಡುತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ. ಇವರ ಮೇಲೆಯೂ ಅನುಮಾನ ವ್ಯಕ್ತವಾಗುತ್ತಿದೆ.

READ | 13 ತಿಂಗಳ ಮಗುವನ್ನು ಬಲಿ ಪಡೆದ ಕೊರೊನಾ, ವೈದ್ಯರು, ಪೋಷಕರೇನು ಹೇಳ್ತಾರೆ?

ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್.ಪಿ. ಡಾ.ಎಚ್‌.ಟಿ.ಶೇಖರ್, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮತ್ತು ಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.suddikanaja.com/2020/12/26/war-between-cobra-cannibalism-in-shiralakoppa-shivamogga/

error: Content is protected !!