
ಸುದ್ದಿ ಕಣಜ.ಕಾಂ ಸೊರಬ
SORAB: ತಾಲೂಕಿನ ತಲ್ಲೂರು (Talluru) ಗ್ರಾಮದಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಡಿದು (Snake bite) ಮೃತಪಟ್ಟಿದ್ದಾಳೆ.
ಪಿಯುಸಿ ವಿದ್ಯಾರ್ಥಿನಿ (PUC student) ಅಕ್ಷತಾ(17) ಮೃತಳು. ತಮ್ಮ ಮನೆಯಲ್ಲಿ ಕುಟುಂಬದೊಂದಿಗೆ ಮಲಗಿದ್ದಾಗ ಭಾನುವಾರ ತಡರಾತ್ರಿ ಹಾವು ಕಡಿದಿದೆ ಎಂದು ತಿಳಿದುಬಂದಿದೆ.
READ | ಶಿವಮೊಗ್ಗ-ಶಿಕಾರಿಪುರ ಹೊಸ ರೈಲು ಮಾರ್ಗಕ್ಕೆ ಡೆಡ್ ಲೈನ್, ಯಾವಾಗ ಪೂರ್ಣಗೊಳ್ಳಲಿದೆ ಕಾಮಗಾರಿ?
ಆನವಟ್ಟಿ ಟು ಮೆಗ್ಗಾನ್
ಹಾವು ಕಡಿದಿದೆ ಎಂದು ಅಕ್ಷತಾ ಕಿರುಚಿದ್ದು, ಆಕೆಯನ್ನು ಆನವಟ್ಟಿ ಆಸ್ಪತ್ರೆಗೆ ಕರೆತರಲಾಗಿದೆ. ಅಲ್ಲಿಂದ ಶಿಕಾರಿಪುರ ಆಸ್ಪತ್ರೆಗೆ ಕಳುಹಿಸಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗದಲ್ಲಿರುವ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ (Meggan district Hospital) ಕಳುಹಿಸಲಾಗಿದೆ. ಇಲ್ಲಿ ದಾಖಲಾದ ಅಕ್ಷತಾ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ. ಆನವಟ್ಟಿ (anavatti) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.