UPSC Result | ಎರಡನೇ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ ಶಿವಮೊಗ್ಗದ ಮೇಘನಾ ಪಾಸ್, ಸಾಧನೆಯ ಗುಟ್ಟೇನು?

Meghana

 

 

ಸುದ್ದಿ‌ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೇಂದ್ರ ಲೋಕಸೇವಾ ಆಯೋಗ (UPSC)ದ ಪರೀಕ್ಷೆಯನ್ನು ಶಿವಮೊಗ್ಗದ ಐ.ಎನ್.ಮೇಘನಾ ಅವರು ದ್ವಿತೀಯ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾರೆ.
ಆಲ್ಕೊಳ ಬಡಾವಣೆಯ ನಿವಾಸಿ, ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ (I.M.Nagaraj) ಹಾಗೂ ಜಿ.ಜಿ.ನಮಿತಾ ಅವರ ಪುತ್ರಿ ಐ.ಎನ್.ಮೇಘನಾ ಯುಪಿಎಸ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಶಿವಮೊಗ್ಗಕ್ಕೆ ಹೆಮ್ಮ ತಂದಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ಮಂಗಳವಾರ ಫಲಿತಾಂಶ ಪ್ರಕಟಿಸಿದೆ. ಮೇಘನಾ ಅಖಿಲ ಭಾರತ ಮಟ್ಟದಲ್ಲಿ 617ನೇ ರ‌್ಯಾಂಕ್ ಪಡೆದಿದ್ದಾರೆ.

READ | ಶಿವಮೊಗ್ಗದ ನಾಲ್ಕು ರೈಲ್ವೆ ನಿಲ್ದಾಣಗಳ ಆಧುನೀಕರಣ, ಯಾವೆಲ್ಲ‌ ಸ್ಟೇಷನ್’ಗಳ‌ ಆಯ್ಕೆ? ಏನೇನು ಕಾಮಗಾರಿ?

ಫಲ‌ ನೀಡಿದ ದ್ವಿತೀಯ ಪ್ರಯತ್ನ
ಮೇಘನಾ ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದರೂ ಸಂದರ್ಶನದಲ್ಲಿ ತೇರ್ಗಡೆ ಆಗಿರಲಿಲ್ಲ. ಈಗ ಎರಡನೇ ಪ್ರಯತ್ನದಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಮೇಘನಾ ಬೆಂಗಳೂರಿನ ವಿಜಯನಗರದ ಇನ್‌ಸೈಟ್ಸ್ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ.
ಏನಿವರ ಸಕ್ಸಸ್ ಸೂತ್ರ?
300ರೊಳಗೆ ರ‌್ಯಾಂಕ್ ಬರುವ ನಿರೀಕ್ಷೆ ಇತ್ತು. ಆದರೆ, ಕಡಿಮೆಯಾಗಿದ್ದು, ಐಪಿಎಸ್ ಸಿಗುವ ನಿರೀಕ್ಷೆ ಇದೆ. ಮತ್ತೊಮ್ಮೆ ಪ್ರಯತ್ನಿಸಿ ಗುರಿಯತ್ತ ಸಾಧಿಸುವೆ ಎನ್ನುತ್ತಾರೆ ಮೇಘನಾ.
ಕಳೆದ ಮೂರು ವರ್ಷಗಳಿಂದ ನಿರಂತರ ಅಭ್ಯಾಸ ಮಾಡಿದ್ದರ ಫಲವಾಗಿ ಯಶಸ್ಸು ಲಭಿಸಿದೆ. ಯುಪಿಎಸ್.ಸಿಯೇ ಗುರಿಯಾಗಿದ್ದರಿಂದ‌ ಮೆಡಿಕಲ್ ಸೀಟ್ ಸಿಕ್ಕರೂ ಅದನ್ನು ಬಿಟ್ಟು ಇಂಜಿನಿಯರಿಂಗ್ ಸೇರಿದ್ದೆ.
ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ನಿರಂತರ‌ ಅಪ್ಡೇಟ್ ಆಗಲೇಬೇಕು. ಅದಕ್ಕಾಗಿ ಕೆಲವು ವೆಬ್ ಸೈಟ್ ಗಳನ್ನು ಬಳಸಿದ್ದೇನೆ.

Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು

error: Content is protected !!