Siddaramaiah | ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ನಿಮಗೇನು ಗೊತ್ತು? ತಿಳಿಯಬೇಕಾದ 6 ವಿಚಾರಗಳಿವು

Siddaramiah 1

 

 

ಸುದ್ದಿ ಕಣಜ.ಕಾಂ ಬೆಂಗಳೂರು
BENGALURU: ಸಿದ್ದರಾಮಯ್ಯ (Siddaramaiah) ಅವರು ಎರಡನೇ ಸಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂ(kanteerava stadium)ನಲ್ಲಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಹಿಂದುಳಿದ ವರ್ಗಗಳ ನಾಯಕರೆಂದೇ ಖ್ಯಾತಿ ಪಡೆದಿರುವ ಸಿದ್ದರಾಮಯ್ಯ ಅವರ ಬಗ್ಗೆ ತಿಳಿದಿರಲೇಬೇಕಾದ ವಿಚಾರಗಳಿವು.

READ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೊರಕಿತು ಐಎಟಿಎ ಕೋಡ್, ಏನಿದು, ಪ್ರಯೋಜನಗಳೇನು?

1. ರಾಜಕಾರಣಿಯಷ್ಟೇ ಅಲ್ಲ, ಕುಸ್ತಿಪಟು
ಸಿದ್ದರಾಮಯ್ಯ ಅವರು ಬರೀ ರಾಜಕಾರಣಿಯಷ್ಟೇ ಅಲ್ಲ. ಅವರೊಬ್ಬ ಕುಸ್ತಿಪಟು ಕೂಡ ಆಗಿದ್ದಾರೆ. ಮೈಸೂರಿನ (Mysore) ಎನ್.ಆರ್.ಮೊಹಲ್ಲಾದ ಗರಡಿ ಮನೆಯಲ್ಲಿ ಕುಸ್ತಿ ಅಭ್ಯಾಸ ಮಾಡಿದ್ದಾರೆ.
2. ವೈದ್ಯರಾಗುವಾಸೆ
ಸಿದ್ದರಾಮಯ್ಯ ಅವರು ವೈದ್ಯರಾಗಬೇಕೆನ್ನುವುದು ಅವರ ತಂದೆಯ ಆಸೆಯಾಗಿತ್ತು. ಆದರೆ, ಸಾಧ್ಯವಾಗಲಿಲ್ಲ. ಅಜ್ಜನ ಕನಸನ್ನು ಮೊಮ್ಮಗ (ಸಿದ್ದರಾಮಯ್ಯ ಪುತ್ರ) ಡಾ.ಯತೀಂದ್ರ ನನಸು ಮಾಡಿದ್ದಾರೆ.
3. ಫೀಸೂ ತೆಗೆದುಕೊಳ್ಳದ ವ್ಯಕ್ತಿತ್ವ
ಸಿದ್ದರಾಮಯ್ಯ ಅವರು ವಕೀಲಿ ವೃತ್ತಿಯಲ್ಲಿದ್ದಾಗ ಬಡವರಿಂದ ಹಣ ಕೂಡ ತೆಗೆದುಕೊಳ್ಳುತ್ತಿರಲಿಲ್ಲ ಎನ್ನುವುದು ವಿಶೇಷ. ಬದಲಿಗೆ ಕಕ್ಷಿದಾರರಿಗೆ ತಮ್ಮದೇ ಜೇಬಿನಿಂದ ಬಸ್ ಚಾರ್ಜ್ ನೀಡುತ್ತಿದ್ದರು.
4. ಠೇವಣಿಗೂ ಹಣವಿರಲಿಲ್ಲ
ಕೆಂಪೀರೇಗೌಡರಿಗೆ ಟಿಕೆಟ್ ಸಿಗದ ಕಾರಣದಿಂದ ಮೈಸೂರಿನ ಜನರು ಸಿದ್ದರಾಮಯ್ಯ ಅವರನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ನಾಮಪತ್ರ ಸಲ್ಲಿಸಿದ್ದರು. ಠೇವಣಿಗೆ ಹಣ ಸಹ ಇರಲಿಲ್ಲ ಎನ್ನುವುದು ಗಮನಾರ್ಹ. ಗುಮಾಸ್ತರಿಂದ 250 ರೂ. ಶುಲ್ಕ ಪಡೆದು ಠೇವಣಿ ಪಾವತಿಸಿದ್ದರು.
5. ಕೈಕೊಟ್ಟ ಸ್ಕೂಟರ್ ನಿಂದ ವಿಧಾನಸಭೆ ಎಂಟ್ರಿ
ರಾಜಕೀಯದಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿರುತ್ತವೆ. ಅವುಗಳು ರಾಜಕಾರಣಿಗಳ ಬದುಕನ್ನೇ ಬದಲಿಸಿರುತ್ತವೆ. ಕೆಲವೊಮ್ಮೆ ನಡೆಯುವ ಕೆಟ್ಟ ಘಟನೆಗಳೂ ಸಹ ಒಳ್ಳೆಯದಕ್ಕೆ ಆಗುತ್ತವೆ ಎನ್ನುವುದಕ್ಕೆ ಸಿದ್ದರಾಮಯ್ಯ ಅವರ ಬದುಕಿನಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಲೋಕದಳದಿಂದ ಅವರಿಗೆ ಬಿ ಫಾರಂ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಚುನಾವಣೆಗೆ ಖರ್ಚು ಮಾಡಲು ಹಣವಿಲ್ಲದ್ದಕ್ಕೆ ನಾಮಪತ್ರ ವಾಪಸ್ ಪಡೆಯಲು ಹೊರಟಿದ್ದರು. ಆದರೆ, ಹೊರೆಟಿದ್ದ ಸ್ಕೂಟರ್ ಕೈಕೊಟ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ ಸ್ಕೂಟರ್ ಮಾತ್ರ ಆನ್ ಆಗಿರಲಿಲ್ಲ. ಈ ಕಾರಣದಿಂದ ನಾಮಪತ್ರ ಹಿಂಪಡೆಯುವ ಸಮಯ ಮೀರಿತ್ತು. ಆದರೆ ಈ ಘಟನೆ ಸಿದ್ದು ಬದುಕನ್ನೇ ಬದಲಿಸಿತ್ತು. ಪಕ್ಷೇತರರಾಗಿ ಕಣದಲ್ಲಿದ್ದು 3 ಸಾವಿರ ಮತಗಳಿಂದ ಗೆದ್ದರು.
6. ಅಪ್ಪಟ ಕನ್ನಡಾಭಿಮಾನಿ ಸಿದ್ದರಾಮಯ್ಯ
ವಿಧಾನಸೌಧದಲ್ಲಿ ಕನ್ನಡ ಬಳಕೆಗೆ ಒತ್ತು ನೀಡಿದ್ದರು. ಇಂಗ್ಲಿಷ್ ಬೆರಳಚ್ಚುಗಳನ್ನು ಹಿಂಪಡೆದು ಕನ್ನಡ ಬೆರಳಚ್ಚುಗಳನ್ನು ನೀಡುವಂತೆ ಮಾಡಿದ್ದು ಸಿದ್ದರಾಮಯ್ಯ.

Congress | ಶಿವಮೊಗ್ಗದಲ್ಲಿ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ? ಯಾರದ್ದೇನು ಪ್ಲಸ್ ಪಾಯಿಂಟ್

error: Content is protected !!