ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನಲ್ಲಿ ಜೂನ್ 7ರ ವರೆಗೆ ಲಾಕ್ಡೌನ್ ವಿಸ್ತರಣೆ ಮಾಡುವ ಬಗ್ಗೆ ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಂದು ವಾರದ ಲಾಕ್ಡೌನ್ ಘೋಷಣೆಗೂ ಮುನ್ನವೇ ಸಾಗರದಲ್ಲಿ ಭಾನುವಾರದಿಂದ ಬುಧವಾರದವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಆದರೆ, ಜಿಲ್ಲಾಡಳಿತ ಸೋಮವಾರದವರೆಗೆ ಕಠಿಣ ಲಾಕ್ ಡೌನ್ ಘೋಷಿಸಿರುವುದರಿಂದ ಸಾಗರದಲ್ಲೂ ಈ ನಿಯಮ ಅನ್ವಯವಾಗಲಿದೆ. ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.