ಮದ್ಯವ್ಯಸನಿ ಮಹಿಳೆ ಖಿನ್ನತೆಯಿಂದ ಆತ್ಮಹತ್ಯೆ

 

 

ಸುದ್ದಿ ಕಣಜ.ಕಾಂ
ಹೊಸನಗರ: ಮದ್ಯವ್ಯಸನಿಯಾಗಿದ್ದ ಮಹಿಳೆಯೊಬ್ಬರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಿಪ್ಪನ್ ಪೇಟೆ ಬಳಿಯ ಆನೆಗದ್ದೆ ಗ್ರಾಮದಲ್ಲಿ ಮಂಜುಳಾ(34) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚೆನ್ನೈ ಮೂಲದ ರುದ್ರಬಾಬು ಎಂಬುವವರೊಂದಿಗೆ ವಿವಾಹವಾಗಿ ಮಲೇಶಿಯಾದಲ್ಲಿ ನೆಲೆಸಿದ್ದರು. ಕೊರೊನಾ ಮೊದಲನೇ ಅಲೆಯಲ್ಲಿ ಆನೆಗದ್ದೆಯಲ್ಲಿಯ ತಾಯಿಗೆ ಮನೆಗೆ ವಾಪಸ್ ಬಂದಿದ್ದರು. ಮನೆಯಲ್ಲಿ ನಿತ್ಯ ಗಲಾಟೆ ಕೂಡ ನಡೆಯುತಿತ್ತು ಎಂದು ತಿಳಿದುಬಂದಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!