ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಂ.ಆರ್.ಎಸ್. ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-4 ಫೀಡರ್ ಗೆ ಸಂಬಂಧಿಸಿದಂತೆ ಗಾಂಧಿ ಪಾರ್ಕ್ ಎದುರು ಬಸವೇಶ್ವರ ಪುತ್ಥಳಿ ಅಳವಡಿಕೆ ಕಾರ್ಯದ ಪ್ರಯುಕ್ತ ಸ್ಪನ್ ಪೋಲ್ ಹಾಗೂ ಭೂಗತ ಕೇಬಲ್ ಅಳವಡಿಕೆ ಕಾರ್ಯ ಇರುವುದರಿಂದ ಜೂನ್ 20 ರ ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ ಕರೆಂಟ್ ಕಟ್ | ನಗರದ ಡಿವಿಎಸ್ ವೃತ್ತ, ಎನ್ಇಎಸ್ ಕಾಲೇಜು, ಕುವೆಂಪು ರಂಗಮಂದಿರ, ಲೂರ್ದು ನಗರ, ಮಹಾನಗರ ಪಾಲಿಕೆ, ಸಿಟಿ ಕ್ಲಬ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪ ವಿಭಾಗ 1 ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.