ಶಿವಮೊಗ್ಗದಲ್ಲಿ ಮಳೆಯ ಆರ್ಭಟ, ಮಂಟಪ ಮುಳುಗಲು ಎರಡು‌ ಅಡಿ‌‌ ಬಾಕಿ

 

 

ಸುದ್ದಿ‌‌ ಕಣಜ.ಕಾಂ
ಶಿವಮೊಗ್ಗ: ಮಲೆನಾಡಿನಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಂಡಿದ್ದು, ತುಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ, ತುಂಗೆ ಮೈದುಂಬಿ ಹರಿಯುತಿದ್ದಾಳೆ.

READ | ಲಾರಿ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ. ಪಂಗನಾಮ, ಭದ್ರಾವತಿಯ ವ್ಯಕ್ತಿ ಅರೆಸ್ಟ್

ಗಾಜನೂರು ಜಲಾಶಯದಿಂದ ಶುಕ್ರವಾರ ರಾತ್ರಿಯವರೆಗೆ 35 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಹೀಗಾಗಿ, ಪುರಾತನ ಪ್ರಸಿದ್ದ ಕೋರ್ಪಳಯ್ಯನ ಛತ್ರದ ಸಮೀಪದ ಮಂಟಪ ಮುಳುಗಲು ಇನ್ನು ಎರಡು ಅಡಿ ಮಾತ್ರ ಬಾಕಿಯಿದೆ.
ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ಮಳೆ ಮುಂದುವರಿದರೆ ಮಂಟಪ ಮುಳುಗಲಿದೆ.
ಶಿವಮೊಗ್ಗ ನಗರದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಳೆ ವಿರಾಮ‌ ನೀಡಿದೆ. ಆದರೆ, ಇನ್ನುಳಿದ ವರ್ಷಧಾರೆ ಮುಂದುವರಿದಿದೆ.

error: Content is protected !!