ಭದ್ರಾವತಿ ನಗರಸಭೆಗೆ 3 ಕೋಟಿ ರೂ. ಅನುದಾನ ನೀಡಲು ಒತ್ತಾಯಿಸಿ ಏಕಾಂಗಿ ಹೋರಾಟ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾದಿಂದಾಗಿ ಭಾರಿ ಸಂಕಷ್ಟ ಎದುರಾಗಿದ್ದು, ಭದ್ರಾವತಿಯ ಬಡ ಜನ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕೂಡಲೇ ಭದ್ರಾವತಿ ನಗರ ಸಭೆಗೆ 3 ಕೋಟಿ ರೂಪಾಯಿ ಅನುದಾನ ನೀಡಬೇಕು ಎಂದು ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸೋಮವಾರ ಏಕಾಂಗಿ ಹೋರಾಟ ನಡೆಸಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ಕೊಳಚೆ ಪ್ರದೇಶ ಹಾಗೂ 25 ಸಾವಿರಕ್ಕೂ ಅಧಿಕ ಜನರು ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಅವರಿಗೆ ಸಹಾಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !!