ಆಸ್ತಿ ತೆರಿಗೆ ಪಾವತಿ ರಿಯಾಯಿತಿ ಕಾಲಾವಧಿ ವಿಸ್ತರಣೆ, ಪಾಲಿಕೆಯಲ್ಲಿ ಹೆಚ್ಚುವರಿ ಕೌಂಟರ್ ಓಪನ್, ಲಾಸ್ಟ್ ಡೇಟ್ ಏನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಅನುಕೂಲವಾಗುವಂತೆ ಕಚೇರಿಯ ಆವರಣದಲ್ಲಿ ಎಲ್ಲ ಕೌಂಟರ್ ಗಳನ್ನು ಪುನರಾರಂಭ ಮಾಡಲಾಗಿದೆ. ಸಾರ್ವಜನಿಕರು ನೇರವಾಗಿ ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://www.suddikanaja.com/2021/06/04/property-tax-collection-door-to-door-by-online/

ಅಲ್ಲದೇ ಈಗಾಗಲೇ ಜಾರಿಯಲ್ಲಿರುವಂತೆ ಆಸ್ತಿ ತೆರಿಗೆ ಪಾವತಿಯನ್ನು ಮಹಾನಗರ ಪಾಲಿಕೆಯ ವೆಬ್‍ಸೈಟ್ ವಿಳಾಸ
ಮುಖಾಂತರವೂ ಪಾವತಿಸಬಹುದಾಗಿದೆ. ಜತೆಗೆ, ಆನ್‍ ಲೈನ್ ತಂತ್ರಾಂಶ, ಯುಪಿಐ ಮೊಬೈಲ್ ಆ್ಯಪ್‍ಗಳಾದ ಪೇಟಿಎಂ, ಫೋನ್‍ಪೇ, ಗೂಗಲ್ ಪೇ ಇತರೆ ಮೂಲಕ ಸಹ ಆಸ್ತಿ ತೆರಿಗೆ ಪಾವತಿ ಮಾಡಬಹುದು.
ಜುಲೈ 31ರ ವರೆಗೆ ಕಾಲಾವಕಾಶ | ಸರ್ಕಾರದ ಸುತ್ತೋಲೆ‌ ಅನ್ವಯ ಜುಲೈ 31ರ ವರೆಗೆ ಆರ್ಥಿಕ ವರ್ಷ 2021-22ನೇ ಸಾಲಿಗೆ ಅನ್ವಯಿಸುವ ಆಸ್ತಿ ತೆರಿಗೆ ಮೇಲಿನ ಶೇ.5 ರ ತೆರಿಗೆ ರಿಯಾಯಿತಿಯ ಸೌಲಭ್ಯದ ಕಾಲಾವಧಿಯನ್ನು ವಿಸ್ತರಿಸಲಾಗಿರುತ್ತದೆ.
ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಚೇರಿಯ ರಾಜಸ್ವ ನಿರೀಕ್ಷಕರು ಹಾಗೂ ಕರ ವಸೂಲಿಗಾರರು ಕಚೇರಿಯಿಂದ ಅನುಮೋದಿತವಾಗಿರುವ ಇಡಿಸಿ(ಪಿಓಎಸ್) ಯಂತ್ರಗಳ ಮೂಲಕ ನೇರವಾಗಿ ಆಸ್ತಿ ಮಾಲೀಕರ ಸ್ವತ್ತಿನ ಸ್ಥಳದಲ್ಲಿ ಪಾವತಿಸಿಕೊಂಡು ರಸೀದಿಯನ್ನು ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆದ್ದರಿಂದ ಈ ಮೇಲ್ಕಂಡ ಅವಧಿಯವರೆಗೆ ಸಾರ್ವಜನಿಕರು ಶೇ.5 ತೆರಿಗೆ ರಿಯಾಯಿತಿಯ ಸೌಲಭ್ಯವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಬಹುದೆಂದು ತಿಳಿಸಿದ್ದಾರೆ.

https://www.suddikanaja.com/2020/11/25/ban-on-china-apps/

error: Content is protected !!