ಬಟ್ಟೆ ತೊಳೆಯಲು ಹೋದಾಗ ಪೋಷಕರ ಎದುರೇ ನೀರಲ್ಲಿ ಮುಳುಗಿ ಬಾಲಕ ಸಾವು

 

 

ಸುದ್ದಿ ಕಣಜ.ಕಾಂ
ಹೊಸನಗರ: ತಾಲೂಕಿನ ರಿಪ್ಪನ್ ಪೇಟೆಯ ಮುತ್ತಲ ಹೊಳೆಯಲ್ಲಿ ಬಿದ್ದು ಬಾಲಕ ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ.
ಮುತ್ತಲ ಗ್ರಾಮದ ನಿವಾಸಿ ಸಿದ್ದೇಶ್ (14) ಎಂಬಾತ ಮೃತಪಟ್ಟಿದ್ದಾನೆ.
ಹೇಗೆ ನಡೆಯಿತು ಘಟನೆ | ಮುತ್ತಲ ಗ್ರಾಮದ ವಾಸಿ ಶೇಷಗಿರಿ ಅವರು ಪತ್ನಿ ಮಧುಮತಿ ಜತೆ ಬಟ್ಟೆ ತೊಳೆಯಲು ಮಕ್ಕಳಾದ ಸಂಜಯ್, ಸಿದ್ದೇಶ್ ಅವರನ್ನು ಕರೆದುಕೊಂಡು ಹೋದಾಗ ಘಟನೆ ನಡೆದಿದೆ.

READ | ರೈತರಿಗೆ ಗುಡ್ ನ್ಯೂಸ್, ಬಹು ಉಪಯೋಗಿ ಬಿದಿರು ಸಸಿ ಉಚಿತವಾಗಿ ಬೇಕಿದ್ದಲ್ಲಿ ಇಲ್ಲಿಗೆ ಸಂಪರ್ಕಿಸಿ

ಬಟ್ಟೆ ತೊಳೆಯಲು ಮುತ್ತಲ ಹೊಳೆಗೆ ಹೋಗಿದ್ದು, ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಎರಡನೇ ಮಗ ಸಿದ್ದೇಶ್ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ದೂರು ನೀಡಲಾಗಿದೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!