ಟ್ರ್ಯಾಕ್ಟರ್ ಮಗುಚಿ ರೈತ ಸಾವು, ಹೇಗೆ ನಡೀತು ಘಟನೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಸಿದ್ಲಿಪುರ ಗ್ರಾಮದ ಜಮೀನಿನಲ್ಲಿ‌ ಉಳುಮೆ ಮಾಡುವಾಗ ಟ್ರ್ಯಾಕ್ಟರ್ ಮಗುಚಿ ಬಿದ್ದು ರೈತ ಮೃತಪಟ್ಟ ಘಟನೆ ಗುರುವಾರ ನಡೆದಿದೆ.

READ | ಬಟ್ಟೆ ತೊಳೆಯಲು ಹೋದಾಗ ಪೋಷಕರ ಎದುರೇ ನೀರಲ್ಲಿ ಮುಳುಗಿ ಬಾಲಕ ಸಾವು

ಸಿದ್ಲೀಪುರ ಗ್ರಾಮದ ಮಂಜಪ್ಪ (48) ಮೃತಪಟ್ಟಿದ್ದಾರೆ. ಜಮೀನು ಉಳುಮೆ ಮಾಡುವಾಗ ಕೆಂಚಪ್ಪ ಅವರು ಟ್ರಾಕ್ಟರ್ ಅನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದು ಟ್ರ್ಯಾಕ್ಟರ್ ಮಗುಚಿ ಬಿದ್ದು ತಲೆಗೆ ಮತ್ತು ಮೈ ಕೈಗೆ ತೀವ್ರ ಗಾಯಗಳಾಗಿ ಆತ ಮೃತಪಟ್ಟಿರುತ್ತಾರೆ.

READ | ರೈತರಿಗೆ ಗುಡ್ ನ್ಯೂಸ್, ಬಹು ಉಪಯೋಗಿ ಬಿದಿರು ಸಸಿ ಉಚಿತವಾಗಿ ಬೇಕಿದ್ದಲ್ಲಿ ಇಲ್ಲಿಗೆ ಸಂಪರ್ಕಿಸಿ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೃತರ ಮಗ ಮೋಹನ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕಲಂ 279, 304(ಎ) ಐಪಿಸಿ ರಿತ್ಯಾ ಪ್ರಕರಣ ದಾಖಲಾಗಿದೆ.

error: Content is protected !!