ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ತಾಲೂಕಿನ ಕೋಡೂರು ಸಮೀಪದ ಅಮ್ಮನಘಟ್ಟ ತಿರುವಿನಲ್ಲಿ ಪೆಟ್ರೋಲ್ ಟ್ಯಾಂಕರ್ ವೊಂದು ಪಲ್ಟಿಯಾಗಿದ್ದು, ಕೆಲಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಪೆಟ್ರೋಲ್ ಬಂಕ್ ಸಮೀಪವೇ ಟ್ಯಾಂಕರ್ ಪಲ್ಟಿ ಆಗಿದ್ದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಕುರಿತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.
ಮಂಗಳೂರಿಂದ ಬರುತ್ತಿದ್ದ ಟ್ಯಾಂಕರ್
ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ಮಂಗಳೂರಿಂದ ಬಳ್ಳಾರಿ ಕಡೆಗೆ ತೆರಳುತಿತ್ತು ಎಂದು ತಿಳಿದುಬಂದಿದೆ. ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿ ಆಗಿರಬಹುದು ಎಂದು ಶಂಕಿಸಲಾಗಿದೆ. ಟ್ಯಾಂಕರ್ ಪಲ್ಟಿ ಆಗಿದ್ದರಿಂದ ಕೆಲಹೊತ್ತು ಸಂಚಾರದಟ್ಟಣೆ ಉಂಟಾಗಿತ್ತು.