Power cut | ಶಿವಮೊಗ್ಗದ ಹಲವೆಡೆ ನಾಳೆ‌ ಕರೆಂಟ್ ಇರಲ್ಲ, ಎಲ್ಲೆಲ್ಲಿ‌ ವಿದ್ಯುತ್ ವ್ಯತ್ಯಯ?

POWER CUT 1

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ. 21 ರಂದು ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಆಲ್ಕೊಳ ಸುತ್ತಮುತ್ತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.
ಎಲ್ಲೆಲ್ಲಿ‌ ವಿದ್ಯುತ್ ವ್ಯತ್ಯಯ?
ಎಸ್.ಎಚ್.ಲೇಔಟ್, ಎಸ್.ಎಲ್.ವಿ. ಲೇಔಟ್, ಕಾಶಿಪುರ ಮುಖ್ಯರಸ್ತೆ, ಕುವೆಂಪು ಬಡಾವಣೆ ಸುತ್ತಮುತ್ತ, ಶ್ರೀನಿವಾಸ್ ವೈನ್ ಸ್ಟೋರ್ ಸುತ್ತಮುತ್ತ, ಲಕ್ಷ್ಮೀಪುರ ಬಡಾವಣೆ, ಪಶುವೈದ್ಯಕೀಯ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಕುಡಿಯುವ ನೀರು, ಮೇವಿಗೆ ಕೊರತೆಯೇ, ಕೂಡಲೇ ಕಂಟ್ರೋಲ್ ರೂಂಗೆ ಕರೆ ಮಾಡಿ

ಆಯನೂರು ಭಾಗದಲ್ಲೂ ಪವರ್‌ ಕಟ್

ಆಯನೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.21 ರಂದು ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಆಯನೂರು, ಕೋಹಳ್ಳಿ, ಮಂಟಘಟ್ಟ, ಸೂಡೂರು, ಕೂಡಿ, ಮಲೆಶಂಕರ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಚನ್ನಳ್ಳಿ ವೀರಣ್ಣನಬೆನವಳ್ಳಿ, ಮೈಸವಳ್ಳಿ, ಕೊನಗವಳ್ಳಿ, ಸೇವಲಾಲ್‍ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

error: Content is protected !!