ತೀರ್ಥಹಳ್ಳಿಯಲ್ಲಿ ಮತ್ತೆ ಮುಸುಕಿನ ಗುದ್ದಾಟ

 

 

ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಕಸ್ತೂರಿ ರಂಗನ್ ವರದಿ ವಿರುದ್ಧ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಸಮರ ಸಾರಿದ್ದು, ನ.7ರಂದು ಪಾದಯಾತ್ರೆಗೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ.ಎo. ನಡುವಿನ ಮುಸುಕಿನ ಗುದ್ದಾಟ ಮತ್ತೆ ಸದ್ದು ಮಾಡಲಾರಂಭಿಸಿದೆ.

 ಕಿಮ್ಮನೆ ಸಿಡಿಮಿಡಿಗೆ ಕಾರಣ: ಪಾದಯಾತ್ರೆಯ ಕರಪತ್ರದಲ್ಲಿ ಕಾಂಗ್ರೆಸ್ ಮುಖಂಡರ ಭಾವಚಿತ್ರಗಳು ಪ್ರಕಟಿಸಿದ್ದೇ ಸದ್ಯದ ಈ ವಿವಾದಕ್ಕೆ ಕಾರಣ.
ಯಾವುದೇ ಕಾರಣಕ್ಕೂ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಯಾರು ಭಾಗವಹಿಸಬಾರದೆಂದು ಕಿಮ್ಮನೆ ಮನವಿ ಮಾಡಿದ್ದಾರೆ. ಇದರ ಜತೆಗೆ, ಕರಪತ್ರದಲ್ಲಿ ಬೇಕಿದ್ದರೆ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ, ಕುಮಾರಸ್ವಾಮಿ ಅವರ ಭಾವಚಿತ್ರಗಳನ್ನು ಬಳಸಲಿ ಎಂದು ಟಾಂಗ್ ನೀಡಿದ್ದಾರೆ.

Kimmane Ratnakar R M Manjunath gowda

Leave a Reply

Your email address will not be published. Required fields are marked *

error: Content is protected !!